ಮನೆ ಆರೋಗ್ಯ ಖರ್ಜೂರ, ಹಾಲು ಆರೋಗ್ಯಕ್ಕೆ ಎಷ್ಟು ಸಹಕಾರಿ? ಇಲ್ಲಿದೆ ಮಾಹಿತಿ

ಖರ್ಜೂರ, ಹಾಲು ಆರೋಗ್ಯಕ್ಕೆ ಎಷ್ಟು ಸಹಕಾರಿ? ಇಲ್ಲಿದೆ ಮಾಹಿತಿ

0

ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡಲು ಖರ್ಜೂರ ಮತ್ತು ಹಾಲು ಅತ್ಯುತ್ತಮ ಕಾಂಬಿನೇಷನ್‌ನ ಆಹಾರವಾಗಿದೆ.
ಹಾಗಾದರೆ ಖರ್ಜೂರವನ್ನು ಹಾಲಿನೊಂದಿಗೆ ಸೇವನೆ ಮಾಡಿದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.
ಖರ್ಜೂರ ಮತ್ತು ಹಾಲನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಶರೀರಕ್ಕೆ ಪ್ರೋಟೀನ್‌ ಅಂಶ ಸಮತೋಲನದಲ್ಲಿ ದೊರೆಯುತ್ತದೆ. ಈ ಮೂಲಕ ಸ್ನಾಯು, ಮೂಳೆಗಳ ಆರೋಗ್ಯ ಉತ್ತಮವಾಗಿರುತ್ತದೆ.
​ರಕ್ತಹೀನತೆಗೆ ಉತ್ತಮ ಮದ್ದು
ರಕ್ತಹೀನತೆಯಿಂದ ಬಳುತ್ತಿರುವವರಿಗೆ ಖರ್ಜೂರ ಮತ್ತು ಹಾಲು ಪರಿಪೂರ್ಣ ಆಹಾರವಾಗಲಿದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ ಮತ್ತು ಅದನ್ನು ಹೋಗಲಾಡಿಸಲು ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಸೇವಿಸಿದಾಗ, ಅದು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಇದರಿಂದಾಗಿ ರಕ್ತಹೀನತೆಯ ಸಮಸ್ಯೆ ಕ್ರಮೇಣ ಗುಣವಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳಿಗೆ, ಗರ್ಭಿಣಿಯರಿಗೆ ಖರ್ಜೂರ ಮತ್ತು ಹಾಲು ಬಹಳ ಒಳ್ಳೆಯದು.
ಶಕ್ತಿಯನ್ನು ಹೆಚ್ಚಿಸುತ್ತದೆ

ಖರ್ಜೂರ ಮತ್ತು ಹಾಲು ಎರಡೂ ಪರಿಪೂರ್ಣ ಆಹಾರವಾಗಿದೆ. ನೀವೇನಾದರೂ ಬೆಳಗ್ಗಿನ ತಿಂಡಿಯನ್ನು ತ್ಯಜಿಸಿದ್ದರೆ ಎರಡು ಖರ್ಜೂರ ತಿಂದು ಒಂದು ಗ್ಲಾಸ್‌ ಹಾಲನ್ನು ಕುಡಿಯಿರಿ. ಇದರಿಂದ ಇಡೀ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಅಲ್ಲದೆ ಹೆಚ್ಚು ಹೊತ್ತು ಹೊಟ್ಟೆ ತುಂಬಿರುತ್ತದೆ.

ಖರ್ಜೂರ ಮತ್ತು ಹಾಲಿನಲ್ಲಿ ಪ್ರಕ್ಟೋಸ್‌ ಮತ್ತು ಗ್ಲೂಕೋಸ್‌ ಅಂಶಗಳು ಅಡಕವಾಗಿದೆ ಹೀಗಾಗಿ ದೇಹ ದಣಿಯದಂತೆ, ಸುಸ್ತಾಗದಂತೆ ನೋಡಿಕೊಳ್ಳುತ್ತದೆ.

​ಸ್ನಾಯುಗಳನ್ನು ಸದೃಢಗೊಳಿಸುತ್ತವೆ
ಖರ್ಜೂರವನ್ನು ಹಾಲಿನೊಂದಿಗೆ ಸೇವನೆ ಮಾಡಿದರೆ ದೇಹಕ್ಕೆ ಉತ್ತಮ ರೀತಿಯ ಪ್ರೋಟೀನ್‌ ದೊರೆಯುತ್ತದೆ. ಹಾಲು ಮತ್ತು ಖರ್ಜೂರ ಎರಡರಲ್ಲೂ ಹೇರಳವಾದ ಪೌಷ್ಟಿಕಾಂಶವಿದೆ. ಅಲ್ಲದೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ಕೂಡ ದೇಹಕ್ಕೆ ದೊರೆಯುತ್ತದೆ.
ಖರ್ಜೂರ ಮತ್ತು ಹಾಲನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಶರೀರಕ್ಕೆ ಪ್ರೋಟೀನ್‌ ಅಂಶ ಸಮತೋಲನದಲ್ಲಿ ದೊರೆಯುತ್ತದೆ. ಈ ಮೂಲಕ ಸ್ನಾಯು, ಮೂಳೆಗಳ ಆರೋಗ್ಯ ಉತ್ತಮವಾಗಿರುತ್ತದೆ.
ಜೀರ್ಣಕ್ರಿಯೆ ಉತ್ತಮವಾಗುತ್ತದೆ
ಬದಲಾದ ಜೀವನಶೈಲಿ, ಆಹಾರ ಸರಿಯಾಗಿ ಸೇವನೆ ಮಾಡದೇ ಇರುವುದು ಹೀಗೆ ಅನೇಕ ಕಾರಣಗಳಿಂದ ಹಲವರಲ್ಲಿ ಆಹಾರ ಸರಿಯಾಗಿ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಇದರ ಪರಿಹಾರಕ್ಕೆ ಖರ್ಜೂರ ಮತ್ತು ಹಾಲು ಅತ್ಯುತ್ತಮವಾಗಿದೆ.
5-6 ಖರ್ಜೂರವನ್ನು ಅರ್ಧ ಲೀಟರ್ ಹಾಲಿನಲ್ಲಿ ಬೇಯಿಸಿ, ತಣ್ಣಗಾಗಿಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.
​ನಿದ್ರಾಹೀನತೆ ನಿವಾರಣೆ
ಅನೇಕರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ಅಂತಹವರು ಬಿಸಿ ಹಾಲಿನ ಜೊತೆಗೆ 2 ಅಥವಾ 3 ಖರ್ಜೂರವನ್ನು ಸೇವನೆ ಮಾಡಿದರೆ ಉತ್ತಮ ನಿದ್ದೆ ಬರುತ್ತದೆ.
ಹೀಗೂ ಮಾಡಬಹುದು, ಖರ್ಜೂರವನ್ನು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ಅದನ್ನು ರುಬ್ಬಿ ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವನೆ ಮಾಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ.

ಹಿಂದಿನ ಲೇಖನಕಡ್ಡಾಯ ಶಿಕ್ಷಣ ಹಕ್ಕು: ಉನ್ನತಾಧಿಕಾರ ಸಮಿತಿ ಸಭೆ ನಡಾವಳಿಯ ಅಂತಿಮ ವರದಿ ಸಲ್ಲಿಸಲು ಅಮಿಕಸ್‌ಗೆ ಹೈಕೋರ್ಟ್‌ ಕಾಲಾವಕಾಶ
ಮುಂದಿನ ಲೇಖನನ್ಯಾಯಾಧೀಶರ ಮೇಲೆ ಟೀಕಾ ಪ್ರಹಾರ: ಮಾಧ್ಯಮಗಳ ವರದಿಗೆ ಸುಪ್ರೀಂ ಕೋರ್ಟ್‌ ಅಸಮಾಧಾನ