ಮನೆ ಮಕ್ಕಳ ಶಿಕ್ಷಣ ಪೇರೆಂಟ್ಸ್ ಹೇಗೆ ವರ್ತಿಸಬೇಕು ? ಭಾಗ-2

ಪೇರೆಂಟ್ಸ್ ಹೇಗೆ ವರ್ತಿಸಬೇಕು ? ಭಾಗ-2

0

ಮಕ್ಕಳ ಅಭಿಪ್ರಾಯಗಳು

* ನಮ್ಮ ತಾಯಿ, ತಂದೆ ನಮ್ಮೊಡನೆ ಸ್ನೇಹಿತರ ಪರಿವರ್ತಿಸಬೇಕು. ಅವರೆಂದರೆ ನಮ್ಮಲ್ಲಿ ಭಯವಿರಬಾರದು.

* ನಮ್ಮ ತಾಯಿ, ತಂದೆ ಯಾವಾಗಲೂ ಕಿತ್ತಾಡಬಾರದು. ಜಗಳ ಮಾಡಬಾರದು. ಇಬ್ಬರೂ ಸದಾ ಸಂತೋಷವಾಗಿ ಮಾತನಾಡುತ್ತಿರಬೇಕು.

* ನಮ್ಮ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಒಂದೇ ಬಾರಿ ಊಟ ಮಾಡಿದರೆ ಚೆನ್ನಾಗಿರುತ್ತದೆ ಒಬಬ್ಬೊಬ್ಬರೇ ಬಂದು ತಿನ್ನುವಂತಿರಬಾರದು.

* ನಮ್ಮ ಪೇರೆಂಟ್ಸ್ ವಾರಕ್ಕೊಮ್ಮೆಯಾದರೂ ನಮ್ಮನ್ನು ಹೊರಗಡೆ ಸುತ್ತಾಡಲು ಕರೆದೊಯ್ಯಬೇಕು. ಐಸ್ ಕ್ರೀಂ ಚಾರ್ಟ್ಸ್ ಹೋಟೆಲ್ ತಿಂಡಿಗಳನ್ನು ಕೊಡಿಸಿದ್ದಿದ್ದರೂ ಪರವಾಗಿಲ್ಲ.

* ನಾನು ನನ್ನ ತಂಗಿ ತುಂಬಾ ಒಳ್ಳೆಯ ಫ್ರೆಂಡ್ಸ್ ಆದರೆ ನಮ್ಮ ತಾಯಿ, ತಂದೆಯರೇ ನಮ್ಮ ಮಧ್ಯೆ ಜಳವನ್ನು ತಂದಿಡುತ್ತಾರೆ ಒಬ್ಬರನ್ನು ಹೊಗಳುವುದು ಮತ್ತೊಬ್ಬರನ್ನು ಹೀಯಾಳಿಸುವಂತಹ ಕೆಲಸವನ್ನು ಮಾಡುತ್ತಾರೆ. ಇದರಿಂದಾಗಿ ನನಗೆ ಅವರ ಮೇಲೆ ತುಂಬಾ ಕೋಪ ಬರುತ್ತದೆ.

* ನಮ್ಮ ತಾಯಿ ತಂದೆಯರಿಬ್ಬರೂ ಉದ್ಯೋಗಿಗಳು. ಅಪ್ಪ ಸಾಫ್ಟ್ ವೇರ್ ಇಂಜೀನಿಯರ್ ಅಮ್ಮ ಡಾಕ್ಟರ್,ಇಬ್ಬರೂ ನಾವು ಮಲಗಿದ ನಂತರ ಯಾವಾಗಲೋ ಬರುತ್ತಾರೆ.ಇನ್ನು ಬೆಳಗಾಯಿತೆಂದರೆ ಶಾಲೆಯ ಹೊರಡುವ ತರಾತುರಿ.

 * ನಮ್ಮ ಪೇರೆಂಟ್ಸ್ ಇಬ್ಬರೂ  ಸಾಫ್ಟ್ ವೇರ್ ಇಂಜಿನಿಯರ್. ನೈಟ್ ಶಿಫ್ಟಲ್ಲೇನಲ್ಲೇ ಕೆಲಸ ಮಾಡುತ್ತಾರೆ.ಹಗಲು ವೇಳೆಯಲ್ಲಿ ಅವರು ಮನೆಯಲ್ಲಿದ್ದರೆ, ನಾವು ಸ್ಕೂಲ್ ನಲ್ಲಿರುತ್ತೇವೆ ನಮ್ಮ ಮಾತುಕತೆಗಳೇನಿದ್ದರೂ ಫ್ರಿಜ್ ಮೇಲೆ ಅಂಟಿಸಿದ ಕಾಗದಗಳಲ್ಲಿ  ಮಾತ್ರ.

 *ಯಾವುದೇ ಪರಿಸ್ಥಿತಿಗಳಲ್ಲೂ ಹಿರಿಯರು ಗಟ್ಟಿಯಾಗಿ ಕೂಗಾಡುತ್ತಾ ಮಾತನಾಡಬಾರದು. ಗಟ್ಟಿಯಾಗಿ ಕೂಗಾಡಿದರೆ /ಮಾತನಾಡಿದರೆ ನಾವು ಕೇಳಿಸಿಕೊಳ್ಳುತ್ತೇವೆಂದುಕೊಳ್ಳುತ್ತಾರೆ. ನಾವು ಶಾಲೆಯಲ್ಲಿ ನಮ್ಮ ಫ್ರೆಂಡ್ಸ್ ನೊಂದಿಗೆ ಆ ವಿಷಯವನ್ನು ನೆನಪಿಸಿಕೊಂಡು ನಗುತ್ತಿರುತ್ತೇವೆ.      

   * ತಾಯಿ ತಂದೆಯರು ತಮ್ಮ ಮಕ್ಕಳನ್ನು ಎದುರು ಮನೆ /ಅಕ್ಕ-ಪಕ್ಕ ಮನೆಯ ಮಕ್ಕಳೊಂದಿಗೆ ನಡೆದುಕೊಳ್ಳುವ ಹಾಗೆ ನೋಡಬೇಕು. ಅವರನ್ನು ನಗುನಗುತ್ತಾ ಮಾತನಾಡುವ ಹಾಗೆಯೇ ನಮ್ಮ ಜೊತೆಯೂ ನಗುತಿರಬೇಕು. 

 *ನಾವು ಆಟ ಆಡಲೂ ಸ್ವಲ್ಪ ಸಮಯ ಕೊಡಬೇಕು.ಯಾವಾಗ ನೋಡಿದರೂ.ಒಂದೇ ಸಮನಾಗಿ ಓದು, ಟ್ಯೂಷನ್, ಹೋಮ್ ವರ್ಕ್ ಎನ್ನುತ್ತಾ ಕಷ್ಟ ಕೊಡಬಾರದು.

* ಅಮ್ಮ ಮನೆಯಲ್ಲಿರುವಾಗ ಅಪ್ಪ ಪೇಪರ್ ಓದುವುದೋ, ಟಿ.ವಿ.ನೋಡುವುದನ್ನೋ ಮಾಡಿದರೆ ಅಮ್ಮನಂತೂ ಸದಾ ಅಡುಗೆ ಮನೆಯಲ್ಲೇ ಇರುತ್ತಾರೆ.ಹಾಗಲ್ಲದೆ ತಂದೆ -ತಾಯಿಯರು ಮಕ್ಕಳೊಂದಿಗೂ ಸ್ವಲ್ಪ ಸಮಯ ಕಳೆಯಬೇಕು

* ತಂದೆ ತಾಯಿಯರು ಹೈಸ್ಕೂಲ್ ಕಾಲೇಜುಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳನ್ನು ಅನುಮಾನಿಸುತ್ತ ಅವ್ಯಾಚ ಶಬ್ದಗಳಿಂದ ಬೈಯಬಾರದು.ಆ ರೀತಿಯಾಗಿ ಬೈಯುತ್ತಿದ್ದರೆ ‘ಆ’ ಕೆಲಸವನ್ನು ಮಾಡಿದರೂ ಮಾಡಬಹುದು,ಅಲ್ಲವೇ?

* ನಮ್ಮ ಮನೆಯಲ್ಲಿ ಅಪ್ಪ,ಅಮ್ಮ ಸರಿಯಾಗಿ ಮಾತನಾಡದಿದ್ದರೆ, ನಮ್ಮ ನೋವು, ನಲಿವುಗಳನ್ನು ಹಂಚಿಕೊಳ್ಳುವುದು ಹುಡುಗರೊಂದಿಗೆ ಮಾತನಾಡಬೇಕೆನಿಸುತ್ತದೆ. ತಾಯಿ, ತಂದೆಯರಿಗಿಂತ ಅವರೇ ಒಳ್ಳೆಯವರೆಂದೆನಿಸುತ್ತದೆ.

* ತಾಯಿ -ತಂದೆಯರ ಪೈಕಿ ಒಬ್ಬರಿಗಾದರೂ ಕೋಪವಿಲ್ಲದಂತಿರಬೇಕು. ಆಗ ಅವರೊಂದಿಗೆ ನಾವು ಧೈರ್ಯವಾಗಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

* ಪರೀಕ್ಷೆಗಳು ಹತ್ತಿರವಾಗುತ್ತಿದ್ದ ಹಾಗೆ ನಮಗಿಂತಲೂ ತಂದೆ ತಾಯಿಯರಿಗೇ ಒತ್ತಡ ಹೆಚ್ಚಾಗಿ ನಮ್ಮನ್ನು ಭಯಪಡಿಸಬಾರದು.

* ಆಗಾಗ್ಗೆ ನಮ್ಮ ಶಾಲೆಗೆ ಬರುತ್ತಿರಬೇಕು. ಟೀಚರ್ ಗ ಳೊಂದಿಗೆ ಮಾತನಾಡಬೇಕು. ಪೇರೆಂಟ್ ಮೀಟಿಂಗ್ ಗಳಿಗೆ ಹಾಜರಾಗಬೇಕು. ಇಲ್ಲದಿದ್ದರೆ, ನಮ್ಮ ಶಾಲೆಯ ಬಗ್ಗೆ ಅವರಿಗೇನು ಗೊತ್ತಾಗುತ್ತದೆ?

 * ತಾಯಿ -ತಂದೆಯವರು ತಮ್ಮ ಮಕ್ಕಳನ್ನು ನೆಂಟರೆಷ್ಟರು, ಬಂಧು- ಬಾಂಧವರ ಮುಂದೆ ಭೖಯಬಾರದು. ಯಾವುದೇ ಕಾರಣಕ್ಕೂ ಅವರ ಮಕ್ಕಳೊಂದಿಗೆ ನಮ್ಮನ್ನು ಹೋಲಿಸಲೇಬಾರದು.

* ನಮ್ಮ ವಿದ್ಯಾಭ್ಯಾಸಕ್ಕೆ ಊಟ,ತಿಂಡಿ ಬಟ್ಟೆಗಳಿಗೆ ಮಾಡುವ ಖರ್ಚುಗಳ ಬಗ್ಗೆ ಪ್ರತಿದಿನ ಒಂದೇ ಸಮನೇ ಹೇಳಿದ್ದನ್ನೇ ಹೇಳುತ್ತಿರಬಾರದು. ದೊಡ್ಡವರಾದ ಮೇಲೆ ಅವರು ನನಗಾಗಿ ಖರ್ಚು ಮಾಡಿದ್ದನ್ನು ತೀರಿಸಿಬಿಡುತ್ತೇವೆ.

 *ನಮಗೆ ಕತೆ, ಪುರಾಣಗಳನ್ನು ಹೇಳುವ ಅಜ್ಜಿ, ತಾತಂದಿರನ್ನು ಆಗಾಗ್ಗೆ ಮನೆಗೆ ಕರೆಸುತ್ತಿರಬೇಕು.ನಾವು ಕೂಡ ಹೋಗಿ ಬರುವುದನ್ನು ಮಾಡುತ್ತಿರಬೇಕು.

* ರಜಾ ದಿನಗಳಲ್ಲಿ ನಮ್ಮನ್ನು ಊರಿಗೆ ಕಳಿಸಬೇಕು. ಹಳ್ಳಿಗಳಲ್ಲಿ ಎಲ್ಲರನ್ನೂ ನೋಡಬೇಕು. ಜೇಡಿಮಣ್ಣಿನಿಂದ ಅಷ್ಟು ಗಟ್ಟಿಯಾದ ಮಡಕೆ, ಕುಂಡಗಳನ್ನು ಹೇಗೆ ಮಾಡುತ್ತಾರೋ ತಿಳಿದುಕೊಳ್ಳಬೇಕೆಂಬ ಆಸೆ.

 *ಯಾವಾಗಲೂ ಓದಿನ ಬಗ್ಗೆಯೇ ಮಾತನಾಡುವ ಹಾಳುಬುದ್ಧಿಯನ್ನು ಬಿಟ್ಟುಬೇಡಬೇಕು. ಇತರ   ವಿಷಯಗಳ ಬಗ್ಗೆಯೂ ಮಾತನಾಡಬೇಕು, ಹರಟೆ ಹೊಡೆಯಬೇಕು.

* ತಂಗಿನಮರ ಹತ್ತಲು ಯಾವ ರೀತಿಯ ಏಣಿಯನ್ನು ಉಪಯೋಗಿಸುತ್ತಾರೋ ತಿಳಿದುಕೊಳ್ಳಬೇಕೆಂದೆನಿಸುತ್ತಿದೆ.

 *ನಾವು ನಮ್ಮ ಪಾಡಿಗೆ ಕಾರ್ಟೂನ್ ಚಾಲೆನ್ ನೋಡತ್ತಿರಬೇಕಾದರೆ ಆಗ ತಾನೇ ಬಂದ ನಮ್ಮ ಡ್ಯಾಡಿ ತಕ್ಷಣ ರಿಮೋಟ್ ಕಿತ್ತುಕೊಂಡು ತವಗಿಷ್ಟವಾದ  ಹುಚ್ಚುಚ್ಚು ಪ್ರೋಗ್ರಾಂಗಳನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದಾಗಿ ನಮಗೆ ಎಲ್ಲಿಲ್ಲದ ಕೋಪ ಬರುತ್ತದೆ.

* ನಮ್ಮ ತಾಯಿ ಯಾವಾಗಲೂ ನೂಡಲ್ಸ್ ಮಾಡುತ್ತಿರುತ್ತಾರೆ ಅಥವಾ ಫಿಜ್ಜಾಗೆ ಆರ್ಡರ್ ನೀಡುತ್ತಾಳೆ. ಮನೆಯಲ್ಲಿ ನಾವು ನೋಡುತ್ತಿದ್ದ ಹಾಗೆಯೇ ದೋಸೆ ಮಾಡಿ ಹಾಕಿದರೆ ತಿನ್ನಬೇಕೆನಿಸುತ್ತದೆ.

 *ನಮ್ ಡ್ಯಾಡಿ ಅವರ ಫ್ರೆಂಡ್ಸ್ ಬಂದಾಗ, ನನ್ನನ್ನು ಕರೆದು ಅವರ ಮುಂದೆ ಅವಮಾನ ಮಾಡುತ್ತಾರೆ.ಇಂತಹ ಡ್ಯಾಡಿ ವೇಸ್ಟ್ ಎಂದೆನಿಸುತ್ತದೆ.

* ನಮ್ಮ ಡ್ಯಾಡಿ ಅದಷ್ಟೇ ಬ್ಯುಸಿಯಾಗಿದ್ದರೂ ನಮ್ಮೊಟ್ಟಿಗೆ ದಿನಕ್ಕೊಮ್ಮೆಯಾದರೂ ಮಾತನಾಡಬೇಕು.ಒಂದು ವೇಳೆ ಊರಿಗೆ ಹೋದರೂ ಅಲ್ಲಿಂದಲೂ ಫೋನ್ ಮಾಡಬೇಕು.

* ನಮ್ಮ ತಂದೆ ಎಲ್ಲಾ ವಿಷಯಗಳು ತಮಗೇ ತಿಳಿದಿರುವ ಹಾಗೆ ಮಾತನಾಡುತ್ತಾರೆ.ನಮ್ಮ ತಾಯಿ ಚಿಕ್ಕಮ್ಮ ದೊಡ್ಡಮ್ಮಂದಿರನ್ನು ಅವ್ಯಾಚ ಶಬ್ದಗಳಿಂದ ಬೈಯುತ್ತಾರೆ. ನಮಗೆ ಈ ರೀತಿಯ ಬೈಗುಳಗಳನ್ನು ಕೇಳುವುದು ಇಷ್ಟವಾಗುವುದಿಲ್ಲ

 ಇತ್ತೀಚೆಗೆ ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮೂರು ವರ್ಷದ ಮನೊಂದಿಗೆ ಸಿನಿಮಾಗೆ ಹೋದರು. ಆ ಸಿನಿಮಾದಲ್ಲಿ ಶೃಂಗಾರ ದೃಶ್ಯಗಳು ಸ್ವಲ್ಪ ಹೆಚ್ಚಾಗಿಯೇ ಇದ್ದವು. ಸಣ್ಣ ಮಗುವಿಗೆ ಏನು ಗೊತ್ತಾಗುತ್ತದೆ ಬಿಡು ಎಂದು ಕರೆದುಕೊಂಡು ಹೋಗಿದ್ದರು. ಸಿನಿಮಾ ನೋಡುತ್ತಿರಬೇಕಾದರೆ, ಯಾವುದಾದರೂ ಚುಂಬನ ದೃಶ್ಯ ಅಥವಾ ಇನ್ನಿತರ ಶೃಂಗಾರ ದೃಶ್ಯಗಳು ಬಂದಾಗ ತಾಯಿ ತನ್ನ ಹ್ಯಾಂಡ್ ಬ್ಯಾಗನ್ನು ಬೇಕಂತಲೇ ಕೆಳಕ್ಕೆ ಹಾಕಿ,”ಚಿನ್ನು ಈ ಬ್ಯಾಗನ್ನು ಎತ್ತಿಕೊಡಮ್ಮಾ” ಎನ್ನುತ್ತಿದ್ದಳು ಆ ರೀತಿ ಮೂರು ಬಾರಿ ನಡೆಯಿತು

   ನಾಲ್ಕನೆ ಬಾರಿಗೆ ಅಂತಹುದೇ ದೃಶ್ಯ ಬರುವ ಸಮಯದಲ್ಲಿ ಗಂಡ -ಹೆಂಡತಿಯರಿಬ್ಬರೂ ಮೈಮರೆತು ಆ ದೃಶ್ಯವನ್ನು ನೋಡುತ್ತಿದ್ದರಂತೆ, ತಕ್ಷಣ ಹುಡುಗ “ಮಮ್ಮಿ ಬ್ಯಾಕ್ ಕೆಳಗೆ ಹಾಕು “ಎಂದ!

ಹಿಂದಿನ ಲೇಖನಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಗೆದ್ದ ನಂತರ ಪ್ರಧಾನಿ ಮೋದಿ ಬಳಿ ಹೋಗುತ್ತೇನೆ: ಕೆ ಎಸ್ ಈಶ್ವರಪ್ಪ
ಮುಂದಿನ ಲೇಖನನನ್ನನ್ನು ಹೊರಗಿನವನು ಎಂದು ಕರೆಯುವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲ: ಜಗದೀಶ ಶೆಟ್ಟರ್ ತಿರುಗೇಟು