ಮನೆ ರಾಜ್ಯ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ವಿಶೇಷ ರೈಲು 2 ದಿನ ರದ್ದು: ವಂದೇ ಭಾರತ ರೈಲಿನ ಸಮಯ...

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ವಿಶೇಷ ರೈಲು 2 ದಿನ ರದ್ದು: ವಂದೇ ಭಾರತ ರೈಲಿನ ಸಮಯ ಪರಿಷ್ಕರಣೆ

0

ಹುಬ್ಬಳ್ಳಿ: ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಕೆಲವು ರೈಲುಗಳನ್ನು ಭಾಗಶಃ ರದ್ದುಗಳಿಸಲಾಗಿದೆ. ವಂದೇ ಭಾರತ ರೈಲಿನ ಸಮಯವನ್ನು ಪರಿಷ್ಕರಿಸಲಾಗಿದೆ.

Join Our Whatsapp Group

ರದ್ದುಗೊಂಡಿರುವ ರೈಲುಗಳು:

ರೈಲು ಸಂಖ್ಯೆ 07339/07340 ಶ್ರೀ ಸಿದ್ಧಾರೂಢ ಸ್ವಾಮಿ  ಹುಬ್ಬಳ್ಳಿ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮಧ್ಯೆ ಸಂಚರಿಸುವ ಎಸ್​ಎಸ್​ಎಸ್​ ಹುಬ್ಬಳ್ಳಿ ವಿಶೇಷ ರೈಲು ಏಪ್ರಿಲ್​ 6 ಮತ್ತು 7 ರಂದು ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06255 ಕೆಎಸ್​ ಆರ್​ ಬೆಂಗಳೂರು-ಮೈಸೂರು ಮೆಮು ವಿಶೇಷ ಮತ್ತು ರೈಲು ಸಂಖ್ಯೆ 06650 ಮೈಸೂರು KSR ಬೆಂಗಳೂರು ಮೆಮು ವಿಶೇಷ ರೈಲು ಏಪ್ರಿಲ್ 7 ಮತ್ತು 8 ರಂದು ರದ್ದುಪಡಿಸಲಾಗಿದೆ.

ಭಾಗಶಃ ರದ್ದು ಗೊಂಡಿರುವ ರೈಲುಗಳು

ರೈಲು ಸಂಖ್ಯೆ 17391/17392 ಕೆಎಸ್ ಆರ್ ಬೆಂಗಳೂರು ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸಂಚರಿಸುವ ರೈಲು ಏಪ್ರಿಲ್​ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06243 ಬೆಂಗಳೂರು ಹೊಸಪೇಟೆ ಮತ್ತು ರೈಲು ಸಂಖ್ಯೆ 06244 ಹೊಸಪೇಟೆ- ಬೆಂಗಳೂರು ರೈಲು ಏಪ್ರಿಲ್ 7, 8 ಮತ್ತು 9 ರಂದು ಭಾಗಶಃ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 16512 ಕೆಎಸ್​​ಆರ್​ ಬೆಂಗಳೂರು-ಕಣ್ಣೂರು ರೈಲು ಏಪ್ರಿಲ್​ 7 ಮತ್ತು 8 ರಂದು ಕೆಎಸ್​ಆರ್​ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗಿದೆ.

ರೈಲುಗಳ ಪರಿಷ್ಕೃತ ಸಮಯ

ರೈಲು ಸಂಖ್ಯೆ 20661 ಕೆಎಸ್ ​ಆರ್​ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್​ 8 ರಂದು ಕೆಎಸ್ ​ಆರ್​ ಬೆಂಗಳೂರಿನಿಂದ 30 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 16591 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮೈಸೂರು ಹಂಪಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 8 ರಂದು ಎಸ್‌ ಎಸ್‌ ಎಸ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 90 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ರೈಲು ಸಂಖ್ಯೆ 12079 ಕೆಎ ಸ್‌ಆರ್ ಬೆಂಗಳೂರು ನಿಂದ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ ಪ್ರೆಸ್ ಅನ್ನು ಏಪ್ರಿಲ್ 8 ಮತ್ತು 9 ರಂದು ಕ್ರಮವಾಗಿ ಕೆಎಸ್‌ಆರ್ ಬೆಂಗಳೂರಿನಿಂದ 30 ನಿಮಿಷ ಮತ್ತು 75 ನಿಮಿಷಗಳ ಕಾಲ ಮರುಹೊಂದಿಸಲಾಗಿದೆ.

ಹಿಂದಿನ ಲೇಖನವಿವಿಧ ಜಿಲ್ಲೆಗಳಲ್ಲಿ 5 ದಿನಗಳ ಕಾಲ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಮುಂದಿನ ಲೇಖನಸರಕಾರಿ – ಖಾಸಗಿ ಬಸ್ ಮುಖಾಮುಖಿ ಢಿಕ್ಕಿ: ಚಾಲಕನ ಸ್ಥಿತಿ ಗಂಭೀರ