ಹೆಚ್.ಐ.ವಿ ಇರುವ ಮಕ್ಕಳಿಗೆ ರೋಗನಿರೋಧಕ ವ್ಯಾಕ್ಸೀನ್ ಗಳನ್ನ ತಪ್ಪದೇ ಕೊಡಬೇಕು. ಇಮ್ಯುನೈಜೇಷನ್ ಷೆಡ್ಯೂಲ್ ಪ್ರಕಾರ ಬಿ.ಸಿ.ಜಿ, ಪೋಲಿಯೋಡ್ರಾಪ್ಸ್, ಟ್ರಿಪಲ್ ಆಂಟೀಜನ್ ಇಂಜೆಕ್ಷನ್, ಹೆಪಟೈಟಿಸ್ -ಬಿ ವ್ಯಾಕ್ಸಿಂಗ್, ಮಿಜಿಲ್ಸ್ ವ್ಯಾಕ್ಸಿನ್, ಹೆಚ್.ಐ.ವಿ ಇನ್ಫ್ಲುಯೆನ್ಸ್ ವ್ಯಾಕ್ಸಿಂಗ್, ಚಿಕನ್ ಫಾಕ್ಸ್ ವ್ಯಾಕ್ಸೀನ್ ಇತ್ಯಾದಿಗಳನ್ನು ಹಾಕಿಸಬೇಕು.
ಆಂಟಿ ರಿಟ್ರೋವೈರಲ್ ಡ್ರಗ್ಸ್ :-
ಹೆಚ್.ಐ.ವಿ ಮಕ್ಕಳಲ್ಲಿ ಇಮ್ಯುನಿಟಿ ವಿಭಾಗ ʼಸಿʼ ಗೆ ಕುಸಿದಾಗ ಆಂಟಿ ರಿಟ್ರೋವೈರಲ್ ಔಷಧಿಗಳನ್ನ ಆರಂಭಿಸಬೇಕು. ಜಿಡೋವುಡಿನ್, ಲಾಮಿವುಡಿನ್, ನೆವಿರಾಪಿನ್, ಕಾಂಬಿನೇಷನ್ನಾಗಲೀ, ಸ್ಟಾಪುಡಿನ್, ಲಾಮಿವುಡಿನ್, ನೆವರಾಪಿನ್- ಕಾಂಬಿನೇಷನ್ನಾಗಲೀ ಯಾವುದಾದರೊಂದು ಕಾಂಬಿನೇಷನ್ನನ್ನು ವಯಸ್ಸು ಮತ್ತು ತೂಕಕ್ಕನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಕೊಡಬೇಕು.
ಸಾಂತ್ವನ ಮತ್ತು ಸಹಕಾರ :-
ಹೆಚ್.ಐ.ವಿ/ಏಡ್ಸ್ ಪೀಡಿತ ಮಕ್ಕಳಿಗೆ ಸಾಂತ್ವಾನ ಮಾರ್ಗದರ್ಶನ ಮತ್ತು ಸಹಕಾರ ಬಹು ಮುಖ್ಯ. ಅವರೊಂದಿಗೆ ಮಾನಸಿಕವಾಗಿ ಮತ್ತು ಭಾವಾತ್ಮಕವಾಗಿ ಸ್ಪಂದಿಸಬೇಕು. ವಯಸ್ಸು ಬೆಳದಂತೆಲ್ಲ ಅವರಿಗೆ ತಿಳುವಳಿಕೆ ನೀಡಬೇಕು. ಸೂಕ್ತ ಎ. ಆರ್. ವಿ ಚಿಕಿತ್ಸೆಯಿಂದ ಪೌಷ್ಟಿಕ ಆಹಾರ ಸೇವನೆಯಿಂದ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬೆಳವಣಿಗೆ ತೃಪ್ತಿಕರವಾಗಿರುತ್ತದೆ. 5 ವರ್ಷ ವಯಸ್ಸಿನಿಂದ ಅವರಿಗೆ ರೋಗದ ಬಗ್ಗೆ ಸಂಪೂರ್ಣ ತಿಳುವಳಿಕೆ ಬರುವಂತೆ ಕೌನ್ಸಿಲಿಂಗ್ ಮಾಡಬೇಕು. ಈ ವಯಸ್ಸಿಗೆ ಅವರಿಗೆ ಆ ಮಟ್ಟದ ತಿಳುವಳಿಕೆ ಬಂದಿರುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವಂತೆ ಅವರನ್ನು ರೂಪಿಸಬೇಕು. ಅಷ್ಟೊತ್ತಿಗೆ ಅವರ ತಾಯಿ ತಂದೆಯವರಿಗೆ ಸಾವು ಸಂಭವಿಸಿರಬಹುದು ಇಲ್ಲವೇ ಜೀವಂತ ಶವಗಳಾಗಿರಬಹುದು, ತಾಯಿ ತಂದೆಯವರು ಇಬ್ಬರು ಸರಿಯಾದ ತಿಳುವಳಿಕೆಯಿಂದ ಚಿಕಿತ್ಸೆ ಪಡೆದರೆ ಅವರ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಂತಹ ಸಮಯದಲ್ಲಿ ಹೆಚ್ಚಾಗಿ ಕುಟುಂಬವನ್ನು ಹೇಗೆ ನಿರ್ವಹಿಸಬೇಕೆಂಬುದನ್ನ, ಭವಿಷ್ಯಕ್ಕಾಗಿ ಹೇಗೆ ಯೋಜನೆ ಕೊಡಬೇಕು ಅವರಿಗೆ ಅಗತ್ಯವಾದ ಆರ್ಥಿಕ ಸಹಾಯ ಒದಗಿಸಬೇಕು, ದುಡಿಯುವ ಮಾರ್ಗವನ್ನು ತೋರಿಸಬೇಕು, ಹಾಗಾದ್ರೆ ಹೆಚ್ಐವಿ ಇದ್ದರೂ ಕೂಡ ಕುಟುಂಬದ ಸಂತೋಷವಾಗಿಯೇ ಇರುತ್ತದೆ. ಮಕ್ಕಳ ವಿಷಯದಲ್ಲಿ ಸರ್ಕಾರ ಮತ್ತು ಸಮಾಜ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಇಲ್ಲದಿದ್ದರೆ ಮಕ್ಕಳು ಅನಾಥಾಲಯಗಳ ಪಾಲಾಗುತ್ತಾರೆ. ಇಲ್ಲವೇ ಏಡ್ಸ್ ಗೆ ಬಲಿಯಾಗುತ್ತಾರೆ.