ಮನೆ ಅಪರಾಧ ಅದ್ದೂರಿ ಮದುವೆಗಾಗಿ ಎಸ್ ಬಿಐನಲ್ಲಿ ಹಣ ದೋಚಿದ್ದ ವ್ಯಕ್ತಿಯ ಬಂಧನ

ಅದ್ದೂರಿ ಮದುವೆಗಾಗಿ ಎಸ್ ಬಿಐನಲ್ಲಿ ಹಣ ದೋಚಿದ್ದ ವ್ಯಕ್ತಿಯ ಬಂಧನ

0

ಹುಬ್ಬಳ್ಳಿ:  ಜ. 21ಕ್ಕೆ ನಿಗದಿಯಾಗಿದ್ದ ತನ್ನ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುವ ಸಲುವಾಗಿ ನಗರದ ಕೊ‌ಪ್ಪಿಕರ್ ರಸ್ತೆಯ ಎಸ್‌ಬಿಐ ಬ್ಯಾಂಕ್‌ನಿಂದ ಹಣ ಕಳ್ಳತನ ಮಾಡಿದ್ದೇನೆ ಎಂದು ಕೃತ್ಯ ಎಸಗಿದ ಆರೋಪಿ ಪ್ರವೀಣ್ ಕುಮಾರ್ ಪೊಲೀಸ್ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ.

ಮೂಲತಃ ವಿಜಯಪುರದವನಾದ ಆರೋಪಿ ಪಿಯುಸಿವರೆಗೆ ಓದಿದ್ದು,  ಮೈಸೂರಿನ ಊಟಿ ರಸ್ತೆಯಲ್ಲಿರುವ ಟಿವಿಎಸ್ ಷೋರೂಂನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ವಿವಿಧ ಕಾರಣಗಳಿಗಾಗಿ ತನ್ನ ಸ್ನೇಹಿತರಿಂದ ಸುಮಾರು 7 ಲಕ್ಷದವರೆಗೆ ಆರೋಪಿ ಸಾಲ ಮಾಡಿಕೊಂಡಿದ್ದ. ಇದೇ ಸಂದರ್ಭದಲ್ಲಿ ಆತನ ಮದುವೆಯೂ ನಿಗದಿಯಾಗಿತ್ತು. ಸಾಲಗಾರರ ಕಾಟದ ಜೊತೆಗೆ, ಮದುವೆ ಖರ್ಚಿಗೆ ಹಣವಿಲ್ಲದಿದ್ದರಿಂದ ಬ್ಯಾಂಕ್‌ ಕಳ್ಳತನಕ್ಕೆ ಮುಂದಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗ್ರಾಹಕನ ಸೋಗಿನಲ್ಲಿ ಜ.18ರಂದು ಮಧ್ಯಾಹ್ನ ಬ್ಯಾಂಕ್‌ಗೆ ಬಂದಿದ್ದ ಆರೋಪಿ, ಅಲ್ಲಿನ ಮ್ಯಾನೇಜರ್ ಮತ್ತು ಕ್ಯಾಷಿಯರ್‌ಗೆ ಚಾಕುವಿನಿಂದ ಬೆದರಿಸಿ, ನಂತರ, 6.39 ಲಕ್ಷ ಹಣವನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗುತ್ತಿದ್ದ ಆತನನ್ನು ಇಬ್ಬರು ಕಾನ್‌ಸ್ಟೆಬಲ್‌ಗಳು ಬೆನ್ನತ್ತಿ ಹಿಡಿದಿದ್ದರು.