ಮನುಷ್ಯ ಎಂದ ಮೇಲೆ ಒಳ್ಳೆಯದು ಮತ್ತು ಕೆಟ್ಟದ್ದು ಆತನಿಗೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎರಡು ಅಭ್ಯಾಸಗಳು ಇರಬೇಕು ಆದರೆ ಒಳ್ಳೆಯದನ್ನು ಮಾತ್ರ ಆಯ್ದುಕೊಳ್ಳಬೇಕು ಮತ್ತು ಅಳವಡಿಸಿ ಕೊಳ್ಳಬೇಕು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿದ್ದರೆ, ಜೀವನ ಸುಖಮಯವಾಗಿ ಆರೋಗ್ಯದಿಂದ ಕೂಡಿರುತ್ತದೆ.
ಕೆಲವೊಂದು ಅಭ್ಯಾಸಗಳು ನಮಗೆ ರೂಢಿಯಾಗಿ ನಮ್ಮ ಆರೋಗ್ಯವನ್ನು ದಿನದಿಂದ ದಿನಕ್ಕೆ ಹಾಳು ಮಾಡುತ್ತವೆ. ಅದಕ್ಕೆ ನಮ್ಮ ಸೋಮಾರಿತನವೂ ಕಾರಣ ಇರಬಹುದು ಅಥವಾ ನಮಗೆ ಗೊತ್ತಿಲ್ಲದೆ ನಾವು ತಪ್ಪು ಮಾಡಬಹುದು.
ಬೆಳಗಿನ ಸಮಯದಲ್ಲಿ ಈ ರೀತಿ ಕೆಲವೊಂದು ನಮ್ಮ ಅನಾರೋಗ್ಯ ಕರ ಅಭ್ಯಾಸ ಗಳಿಂದ ನಮ್ಮ ಮಾನಸಿಕ ನೆಮ್ಮದಿ ಮತ್ತು ದೇಹದ ಆರೋಗ್ಯ ಎರಡು ಹಾಳಾಗುತ್ತದೆ. ಅಂತಹ ಅಭ್ಯಾಸ ಗಳ ಬಗ್ಗೆ ಜೂಹಿ ಕಪೂರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಇಲ್ಲಿ ಶೇರ್ ಮಾಡಲಾಗಿದೆ….
ಈ ತರಹದ ಅಭ್ಯಾಸಗಳನ್ನು ಬಿಟ್ಟುಬಿಡಿ!
ಅಲಾರಾಂ ಇಟ್ಟು ಎದ್ದೇಳುವುದು
• ಇದು ತುಂಬಾ ಕೆಟ್ಟ ಅಭ್ಯಾಸ ಎಂದು ಸಂಶೋಧನೆ ಹೇಳುತ್ತದೆ. ಯಾರಿಗೆ ಸ್ಲೀಪಿಂಗ್ ಪ್ಯಾಟರ್ನ್ ಸರಿ ಇರುವುದಿಲ್ಲ ಅಂತಹವರು ಮಾತ್ರ ಅಲಾರಾಂ ಮೂಲಕ ಎಚ್ಚರಗೊಳ್ಳುವ ತೊಂದರೆಗೆ ಸಿಕ್ಕಿಹಾಕಿ ಕೊಳ್ಳುತ್ತಾರೆ.
• ತುಂಬಾ ಗಾಢವಾದ ನಿದ್ರೆಯಲ್ಲಿರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಅಲಾರಂ ದೇಹದಲ್ಲಿ ಮಾನಸಿಕ ಒತ್ತಡಕ್ಕೆ ಸಂಬಂಧಪಟ್ಟಂತೆ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
• ಹಾಗಾಗಿ ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗಿ ಬೆಳಗ್ಗೆ ಒಂದೇ ಸಮಯಕ್ಕೆ ಎದ್ದೇಳುವ ಅಭ್ಯಾಸ ಮಾಡಿ ಕೊಂಡರೆ, ಅಲಾರಾಂ ಅವಶ್ಯಕತೆ ಇರುವುದಿಲ್ಲ. ಆರಾಮವಾಗಿ ಸುಖಕರ ನಿದ್ದೆ ಮಾಡಿ ಎದ್ದೇಳಬಹುದು.
ಬೆಳಗ್ಗೆ ಎದ್ದು ಫೋನ್ ಚೆಕ್ ಮಾಡುವುದು
• ಇದು ಸಹ ಕಣ್ಣುಗಳಿಗೆ ಮತ್ತು ಮನಸ್ಸಿಗೆ ಘಾಸಿ ಉಂಟು ಮಾಡುವ ಕೆಲಸ ಎಂದು ಅಂದುಕೊಳ್ಳಬಹುದು. ಏಕೆಂ ದರೆ ಫೋನ್ ಸ್ಕ್ರೀನ್ ನಲ್ಲಿ ಬಿಡುಗಡೆಯಾಗುವ ನೀಲಿ ಬಣ್ಣ ನಮ್ಮ ಕಣ್ಣುಗಳಿಗೆ ನೇರವಾಗಿ ರಾಚುತ್ತದೆ.
• ಇಷ್ಟೇ ಅಲ್ಲದೆ ಅಪ್ಪಿ ತಪ್ಪಿ ಫೋನ್ ನಲ್ಲಿ ಯಾವುದಾದ ರೂ ಅಹಿತಕರ ಸುದ್ದಿಯನ್ನು ಬೆಳ್ಳಂಬೆಳಗ್ಗೆ ನೋಡಿದರೆ ಇಡೀ ದಿನ ಮಾನಸಿಕ ನೆಮ್ಮದಿ ಇರುವುದಿಲ್ಲ.
• ಹಾಗಾಗಿ ಬೆಳಗಿನ ಸಂದರ್ಭದಲ್ಲಿ ಎದ್ದ ತಕ್ಷಣ ಫೋನ್ ಸ್ಕ್ರೀನ್ ನೋಡುವ ಬದಲು ದೂರದಲ್ಲಿ ಹಾರುವ ಹಕ್ಕಿಗಳು, ಬಿಲ್ಡಿಂಗ್, ಮರಗಳು ಇವುಗಳನ್ನು ನೋಡಿ ಖುಷಿ ಪಡಿ. ಆಗ ನಿಮ್ಮ ಸಂಪೂರ್ಣ ದಿನ ಆನಂದಮ ಯವಾಗಿ ಸಾಗುತ್ತದೆ.
ನೇರವಾಗಿ ಹಾಸಿಗೆಯಿಂದ ಎದ್ದೇಳುವುದು
ಯಾವುದೇ ಸಂದರ್ಭದಲ್ಲಿ ನಾವು ಮಲಗಿದಾಗ ಬೆನ್ನು ಹಾಸಿಗೆ ಕಡೆಗೆ ಮಾಡಿ ಮಲಗಿರುತ್ತೇವೆ ಎಂದಾದರೆ ಅದೇ ತರಹ ಮೇಲೆ ಎದ್ದೇಳಬಾರದು.
ಏಕೆಂದರೆ ನಾವು ಗುರುತ್ವಾಕರ್ಷಣೆಗೆ ಒಳಗಾಗಿರುತ್ತೇವೆ. ಹಾಗಾಗಿ ಒಂದು ಕಡೆ ತಿರುಗಿಕೊಂಡು ಎದ್ದೇಳುವುದು ಒಳ್ಳೆಯದು.
ಸ್ವಲ್ಪ ಕಷ್ಟ ಎನಿಸಿದರು ಮತ್ತೆ ಅಭ್ಯಾಸವಾಗಿ ಬಿಡುತ್ತದೆ
• ಮಕ್ಕಳಿಂದಲೂ ಈ ಅಭ್ಯಾಸವನ್ನು ಮಾಡಿಕೊಂಡರೆ ಬೆನ್ನು ಹುರಿಗೆ ಯಾವುದೇ ತರಹದ ತೊಂದರೆ ಎದುರಾಗುವುದಿಲ್ಲ.
• ಹಾಗಾಗಿ ಈ ಒಂದು ಅಭ್ಯಾಸವನ್ನು ಮಾಡಿಕೊಳ್ಳಿ. ಆರಂಭದಲ್ಲಿ ಇಂತಹ ಅಭ್ಯಾಸಗಳು ರೂಢಿ ಮಾಡಿ ಕೊಳ್ಳುವುದು ಸ್ವಲ್ಪ ಕಷ್ಟ ಎನಿಸಿದರು ಕೂಡ ದಿನ ಕಳೆದಂತೆ ಅಭ್ಯಾಸವಾಗಿ ಬಿಡುತ್ತದೆ. ಹಾಗಾಗಿ ಕಟ್ಟುನಿಟ್ಟಾಗಿ ಪಾಲಿಸಿ.