ಮನೆ ಕ್ರೀಡೆ India VS New Zealand: ಬೃಹತ್ ಮೊತ್ತ ಪೇರಿಸಿದ ಇಂಡಿಯಾ

India VS New Zealand: ಬೃಹತ್ ಮೊತ್ತ ಪೇರಿಸಿದ ಇಂಡಿಯಾ

0

ಹೈದರಾಬಾದ್(Hyderabad): ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ  ಭಾರತ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 349 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ನ್ಯೂಜಿಲೆಂಡ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಶುಭಮನ್ ಗಿಲ್ 145 ಎಸೆತಗಳಲ್ಲಿ ದ್ವಿಶತಕದ (208) ಸಾಧನೆ ಮಾಡಿದರು. ಈ ಮೂಲಕ 23 ವರ್ಷದ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿದರು.

49ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗಿಲ್ 200 ರನ್‌ಗಳ ಗಡಿ ದಾಟಿದರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ (19 ಇನ್ನಿಂಗ್ಸ್) ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೂ ಗಿಲ್ ಪಾತ್ರರಾದರು. 149 ಎಸೆತಗಳನ್ನು ಎದುರಿಸಿದ ಗಿಲ್, 19 ಬೌಂಡರಿ ಹಾಗೂ ಒಂಬತ್ತು ಸಿಕ್ಸರ್‌’ಗಳ ನೆರವಿನಿಂದ 208 ರನ್ ಗಳಿಸಿದರು.

ಈ ಮೊದಲು ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಲ್ಲದೆ ಗಿಲ್ ಜೊತೆಗೆ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ರೋಹಿತ್ 34 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದ ಶತಕವೀರ ವಿರಾಟ್ ಕೊಹ್ಲಿ 8 ರನ್ ಗಳಿಸಿ ಔಟ್ ಆದರು. ಕಿಶಾನ್ ಕಿಶನ್ ಸಹ (5) ನಿರಾಸೆ ಮೂಡಿಸಿದರು. ಸೂರ್ಯಕುಮಾರ್ ಯಾದವ್ (31) ಹಾಗೂ ಹಾರ್ದಿಕ್ ಪಾಂಡ್ಯ (28) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ (12), ಕುಲದೀಪ್ ಯಾದವ್ 5* ಹಾಗೂ ಮೊಹಮ್ಮದ್ ಶಮಿ 2* ರನ್ ಗಳಿಸಿದರು.

ಹಿಂದಿನ ಲೇಖನಚಿಕ್ಕಮಗಳೂರು ಹಬ್ಬ ಜನರಲ್ಲಿ ಉತ್ಸಾಹ ತುಂಬಲಿದೆ : ಸಿಎಂ ಬೊಮ್ಮಾಯಿ
ಮುಂದಿನ ಲೇಖನಸಿರಿ ಧಾನ್ಯಗಳ ಬಳಕೆಯಿಂದ ಆರೋಗ್ಯ ವೃದ್ಧಿ: ಬಿ.ಸಿ.ಪಾಟೀಲ್