ಮನೆ ಕ್ರೀಡೆ ಯುವರಾಜ್ ಸಿಂಗ್, ನಟಿ ಹೇಜಲ್ ಕೀಚ್ ದಂಪತಿಗೆ ಗಂಡು ಮಗು ಜನನ

ಯುವರಾಜ್ ಸಿಂಗ್, ನಟಿ ಹೇಜಲ್ ಕೀಚ್ ದಂಪತಿಗೆ ಗಂಡು ಮಗು ಜನನ

0

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ನಟಿ ಹೇಜಲ್ ಕೀಚ್ ದಂಪತಿಗೆ ಗಂಡು ಮಗು ಜನಿಸಿದ್ದು, ದಂಪತಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

 ‘’ನಮ್ಮೆಲ್ಲ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ… ಇಂದು ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಹಂಚಿಕೊಳ್ಳಲು ನಾವು ಸಂತೋಷ ಪಡುತ್ತೇವೆ. ದೇವರ ಆಶೀರ್ವಾದಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಈ ಸಮಯದಲ್ಲಿ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ. ಲವ್ ಹೇಜಲ್ ಮತ್ತು ಯುವರಾಜ್’’ ಎಂದು ನಟಿ ಹೇಜಲ್ ಕೀಚ್ ಮತ್ತು ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಸಂತಸ ಹಂಚಿಕೊಂಡಿದ್ದಾರೆ.

ಯುಜರಾಜ್ ಸಿಂಗ್ – ಹೇಜಲ್ ಕೀಚ್ ದಂಪತಿಗೆ ನೇಹಾ ಧೂಪಿಯಾ, ಅಂಗದ್ ಬೇಡಿ, ಇರ್ಫಾನ್ ಪಠಾಣ್, ಬಿಪಾಶಾ ಬಸು, ಆಯುಷ್ಮಾನ್ ಖುರಾನಾ, ರಣ್‌ವಿಜಯ್ ಸಿಂಗ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತಿತರ ಗಣ್ಯರು ಶುಭ ಹಾರೈಸುತ್ತಿದ್ದಾರೆ.

ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್‌ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 2015ರ ನವೆಂಬರ್ 12 ರಂದು ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ ನಿಶ್ಚಿತಾರ್ಥ ಮಾಡಿಕೊಂಡರು. 2016ರ ನವೆಂಬರ್ 30 ರಂದು ದಾಂಪತ್ಯ ಜೀವನಕ್ಕೆ ಯುವರಾಜ್ ಕುಮಾರ್ – ಹೇಜಲ್ ಕೀಚ್ ಕಾಲಿರಿಸಿದರು.


ಮೊಮ್ಮಗನನ್ನು ಚಾಂಪ್ ಎಂದ ಯೋಗರಾಜ್ ಸಿಂಗ್
ಯುವರಾಜ್ ಸಿಂಗ್ ಅವರ ತಂದೆ, ಮಾಜಿ ಕ್ರಿಕೆಟಿಗ ಮತ್ತು ನಟ ಯೋಗರಾಜ್ ಸಿಂಗ್ ಅವರು ತಮ್ಮ ಮೊಮ್ಮಗನನ್ನು ‘ಚಾಂಪ್’ ಎಂದು ಕರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯುವರಾಜ್ ಸಿಂಗ್, ‘’ಹಲೋ ತಾತಾ.. ಸೀದಾ ನೆಟ್ ಪ್ರ್ಯಾಕ್ಟೀಸ್‌ಗೆ ಹೋಗುತ್ತೇವೆ’’ ಎಂದು ಬರೆದಿದ್ದಾರೆ. ಇದಕ್ಕೆ, ‘’ಪರಂಪರೆ ಮುಂದುವರೆಯಬೇಕು’’ ಎಂದು ಯೋಗರಾಜ್ ಸಿಂಗ್ ರಿಪ್ಲೈ ಮಾಡಿದ್ದಾರೆ.

ಹಿಂದಿನ ಲೇಖನಪದ್ಮ ಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ
ಮುಂದಿನ ಲೇಖನಕರಾಮುವಿಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’