ಮನೆ ಸುದ್ದಿ ಜಾಲ ಕರಾಮುವಿಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’

ಕರಾಮುವಿಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’

0

ಮೈಸೂರು: ಮೌಲ್ಯಮಾಪನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ-ದೂರ ಶಿಕ್ಷಣ ಸಂಸ್ಥೆಯವರು ದೇಶದ ದೂರ ಶಿಕ್ಷಣ ವಿಶ್ವವಿದ್ಯಾನಿಲಯಗಳ ಅತ್ಯುತ್ತಮ ಶ್ರೇಣಿ ದೊರಕಿದೆ.

ಕರಾಮುವಿ ಮಾಡುತ್ತಿರುವ ಶೈಕ್ಷಣಿಕ ಆಡಳಿತಾತ್ಮಕ ಕಾರ್ಯಗಳಿಗೆ ಯುಜಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.  ಒಟ್ಟು 400 ಅಂಕದಲ್ಲಿ 300 ಅಂಕ ಕರಾಮುವಿಗೆ ಲಭಿಸಿದೆ. ಅದರಲ್ಲಿ ಅಧ್ಯಾಪಕರ ಶ್ರೇಣಿಗೆ 20ಕ್ಕೆ 19.85% ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರದ ಕಾರ್ಯಗಳಿಗೆ 10 ಕ್ಕೆ 09 ಅಂಕ ಲಭಿಸಿದೆ. ದಾಖಲಾತಿ ಮತ್ತು ಶುಲ್ಕಗಳಿಗೆ ಸಂಬಂಧಿಸಿದಂತೆ 20 ಕ್ಕೆ 20 ಅಂಕಗಳು ದೊರಕಿದೆ. ಕರಾಮುವಿ ‘ಅತ್ಯುತ್ತಮ’ ಶ್ರೇಯಾಂಕ ಲಭಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರ ದೂರದರ್ಶಿತ್ವ ಆಡಳಿತ ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿಗೆ ಸಂದ ಗರಿಮೆಯಾಗಿದೆ ಎಂದು ಕರಾಮುವಿ ಸಿಐಕ್ಯೂಎ ನಿರ್ದೇಶಕ ಡಾ. ನಿರಂಜನ್ ರಾಜ್ ಎಸ್ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಯುವರಾಜ್ ಸಿಂಗ್, ನಟಿ ಹೇಜಲ್ ಕೀಚ್ ದಂಪತಿಗೆ ಗಂಡು ಮಗು ಜನನ
ಮುಂದಿನ ಲೇಖನಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ: ರಾಜಪಥ್ ನಲ್ಲಿ ಪರೇಡ್ ಪ್ರಾರಂಭ