ಮನೆ ರಾಷ್ಟ್ರೀಯ ಇಂಡಿಗೊ ವಿಮಾನದ ಎಂಜಿನ್’ಗಳಲ್ಲಿ ಬೆಂಕಿ: ತನಿಖೆಗೆ ಆದೇಶ

ಇಂಡಿಗೊ ವಿಮಾನದ ಎಂಜಿನ್’ಗಳಲ್ಲಿ ಬೆಂಕಿ: ತನಿಖೆಗೆ ಆದೇಶ

0

ನವದೆಹಲಿ(Newdelhi): ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೊ ವಿಮಾನದ ಎರಡು ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣದ  ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಆದೇಶಿಸಿದೆ.

ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6ಇ–2131 ಇಂಡಿಗೊ ವಿಮಾನವು ಟೇಕ್‌ ಆಫ್‌ ಆದ ಕೂಡಲೇ ಎರಡು ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜತೆಗೆ ದೊಡ್ಡ ಶಬ್ದ ಕೇಳಿಸಿದೆ. ಈ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಅಲ್ಲೇ ತಪಾಸಣೆ ನಡೆಸಲಾಗುತ್ತಿದೆ  ಎಂದು ತಿಳಿಸಿದ್ದಾರೆ.

ರಾತ್ರಿ 9.30ರ ಸುಮಾರಿಗೆ ವಿಮಾನ ಟೇಕ್‌ ಆಫ್‌ ಆಗುವ ವೇಳೆ ಈ ಅವಘಡ ನಡೆದಿದ್ದು, ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ಪರ್ಯಾಯ ವಿಮಾನದ ಮೂಲಕ ಗಮ್ಯ ಸ್ಥಾನಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣದ ವೇಳೆ ಉಂಟಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಯಾಣಿಕರು ಹಂಚಿಕೊಂಡಿರುವ ವಿಡಿಯೊದಲ್ಲಿ ವಿಮಾನ ಟೇಕ್‌ ಆಫ್‌ ಆದ ಕೂಡಲೇ ಎಂಜಿನ್‌ಗೆ ಬೆಂಕಿ ತಗುಲಿದ ದೃಶ್ಯ ಸೆರೆಯಾಗಿದೆ.

ಹಿಂದಿನ ಲೇಖನಸಿವಿಲ್ ಇಂಜಿನಿಯರ್’ಗಳ ಹುದ್ದೆ ನೇಮಕ: ದಾಖಲೆ ಪರಿಶೀಲನೆಗೆ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳ ವಿವರ
ಮುಂದಿನ ಲೇಖನಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತಕ್ಕಾಗಿ 20 ಕೋಟಿ ನೀಡಿ: ಸಿಎಂಗೆ ದಿನೇಶ್ ಗೂಳಿಗೌಡ ಮನವಿ