ಮನೆ ಸ್ಥಳೀಯ ದಸರಾ ವಿಶೇಷ ದೀಪಾಲಂಕಾರಕ್ಕೆ ಸಲಹೆಗಳ ಆಹ್ವಾನ

ದಸರಾ ವಿಶೇಷ ದೀಪಾಲಂಕಾರಕ್ಕೆ ಸಲಹೆಗಳ ಆಹ್ವಾನ

0

Join Our Whatsapp Group

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಚಾ.ವಿ.ಸ.ನಿ.ನಿ ವತಿಯಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ ಪ್ರಮುಖ ವೃತಗಳು, ರಸ್ತೆಗಳು ಹಾಗೂ ಪ್ರತಿಕೃತಿಗಳಿಗೆ ದೀಪಾಲಂಕಾರ ಮಾಡಲಾಗುತ್ತಿದ್ದು, ದೀಪಾಲಂಕಾರವನ್ನು ವಿನೂತನವಾಗಿ ನಿರ್ವಹಿಸುವ ಉದ್ದೇಶದಿಂದ ಸಾರ್ವಜನಿಕರಿಂದ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ವಿನೂತನ ಮಾದರಿಗಳು/ ಪ್ರತಿಕೃತಿಗಳು ಹಾಗೂ ಸಲಹೆ ಸೂಚನೆಗಳೇನಾದರೂ ಇದ್ದಲ್ಲಿ ಆಗಸ್ಟ್ ೨೮ ರೊಳಗೆ ಛಾಯಾಚಿತ್ರ ಮತ್ತು ವೀಡಿಯೋಗಳನ್ನು ಕಛೇರಿ ಇ-ಮೇಲ್ ವಿಳಾಸ [email protected], [email protected] ಗೆ ಸಲ್ಲಿಸಬಹುದು.

 ಹೆಚ್ಚಿನ ಮಾಹಿತಿಗಾಗಿ ಚಾ.ವಿ.ಸ.ನಿ.ನಿ ಕಾರ್ಯ ಮತ್ತು ಪಾಲನಾ ವೃತ್ತದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ ಶ್ರೀನಾಥ್ ದೂ.ಸಂ:೯೪೪೯೫೯೫೫೪೮ ಅನ್ನು ಸಂಪರ್ಕಿಸಬಹುದು ಎಂದು ಚಾ.ವಿ.ಸ.ನಿ.ನಿ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಗೃಹಲಕ್ಷ್ಮಿ : ಉಪ ಮುಖ್ಯಮಂತ್ರಿಗಳಿoದ ಪೂರ್ವಭಾವಿ ಸಭೆ
ಮುಂದಿನ ಲೇಖನಕೃಷ್ಣನ ಸ್ವಾಗತ