ಮನೆ ಕ್ರೀಡೆ ಐಪಿಎಲ್ 2022 ಹರಾಜು: ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ; ಫಾಫ್ ಡುಪ್ಲೆಸಿಸ್ ಆರ್ ಸಿಬಿಗೆ

ಐಪಿಎಲ್ 2022 ಹರಾಜು: ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ; ಫಾಫ್ ಡುಪ್ಲೆಸಿಸ್ ಆರ್ ಸಿಬಿಗೆ

0

ಬೆಂಗಳೂರುಇಂಡಿಯನ್ ಪ್ರೀಮಿಯರ್ ಲೀಗ್ 2022 ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, 12.25 ಕೋಟಿ ರೂ. ಗೆ ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ ಜಾರಿದ್ದು, 7 ಕೋಟಿ ಬಿಡ್ ಮಾಡಿ ಫಾಫ್ ಡುಪ್ಲೆಸಿಸ್ ರನ್ನು ಆರ್ ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

15ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಬಿಡ್ ಮಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ವಿಶೇಷವೆಂದರೆ ಎರಡು ಹೊಸ ತಂಡಗಳು ಟೂರ್ನಿಗೆ ಸೇರ್ಪಡೆಯಾಗಿದ್ದು, ಆಟಗಾರರಿಗೆ ಅವಕಾಶಗಳು ವಿಫುಲವಾಗಿಯೇ ದೊರೆಯಲಿದೆ.

ಈ ಹಿಂದೆ ಫ್ರಾಂಚೈಸಿಗಳು ತಮ್ಮ ತಮ್ಮ ತಂಡದಿಂದ ಬಿಡುಗಡೆ ಮಾಡಿದ್ದ ಮತ್ತು ಐಪಿಎಲ್ ಗೆ ನೋಂದಾಯಿಸಿಕೊಂಡಿದ್ದ ನೂರಾರು ಆಟಗಾರರನ್ನು ಬಿಡ್ಡಿಂಗ್ ಹಾಕಲಾಗಿದ್ದು, ಈಗಾಗಲೇ ಸಾಕಷ್ಟು ಆಟಗಾರರು ದುಬಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಈ ಪೈಕಿ ಭಾರತ ತಂಡದ ಆಟಗಾದ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಜ 12.25 ಕೋಟಿ ರೂ ಬಿಡ್ ಮಾಡಿ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅಯ್ಯರ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ತಂಡಗಳ ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಕೆಕೆಆರ್ ತನ್ನ ತೆಕ್ಕೆಗೆ  ಹಾಕಿಕೊಂಡಿದೆ. 

ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಫಾಫ್ ಡುಪ್ಲೆಸಿಸ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ಬಿಡ್ ಮಾಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.  ಇನ್ನು ವೆಸ್ಟ್‌ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡ್ವೇನ್ ಬ್ರಾವೊ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 4.40 ಕೋಟಿ ರೂ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

ಉಳಿದಂತೆ ಬಿಡ್ ಆದ ಆಟಗಾರರ ವಿವರ ಇಂತಿದೆ.

ಟ್ರೆಂಟ್ ಬೌಲ್ಟ್
ತಂಡ: ರಾಜಸ್ಥಾನ್ ರಾಯಲ್ಸ್

ಬಿಡ್ಡಿಂಗ್ ಬೆಲೆ: 8 ಕೋಟಿ ರೂ

ಆರ್ ಅಶ್ವಿನ್
ತಂಡ: ರಾಜಸ್ಥಾನ್ ರಾಯಲ್ಸ್

ಬಿಡ್ಡಿಂಗ್ ಬೆಲೆ: 5 ಕೋಟಿ ರೂ

ಶಿಮ್ರಾನ್ ಹೆಟ್ಮೆಯರ್
ತಂಡ: ರಾಜಸ್ಥಾನ್ ರಾಯಲ್ಸ್

ಬಿಡ್ಡಿಂಗ್ ಬೆಲೆ: 8.50 ಕೋಟಿ

ದೇವದತ್ ಪಡಿಕ್ಕಲ್
ರಾಜಸ್ಥಾನ್ ರಾಯಲ್ಸ್
ಬಿಡ್ಡಿಂಗ್ ಬೆಲೆ: 7.75 ಕೋಟಿ ರೂ

ಕಗಿಸೊ ರಬಾಡ
ತಂಡ: ಪಂಜಾಬ್ ಕಿಂಗ್ಸ್
ಬಿಡ್ಡಿಂಗ್ ಬೆಲೆ: 9.25 ಕೋಟಿ ರೂ

ಶಿಖರ್ ಧವನ್
ತಂಡ: ಪಂಜಾಬ್ ಕಿಂಗ್ಸ್
ಬಿಡ್ಡಿಂಗ್ ಬೆಲೆ: 8.25 ಕೋಟಿ ರೂ

ಪ್ಯಾಟ್ ಕಮಿನ್ಸ್
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್

ಬಿಡ್ಡಿಂಗ್ ಬೆಲೆ: 7.25 ಕೋಟಿ ರೂ

ನಿತೀಶ್ ರಾಣಾ
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಬಿಡ್ಡಿಂಗ್ ಬೆಲೆ: 8 ಕೋಟಿ ರೂ

ಫಾಫ್ ಡು ಪ್ಲೆಸಿಸ್
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬಿಡ್ಡಿಂಗ್ ಬೆಲೆ: 7 ಕೋಟಿ ರೂ

ಹರ್ಷ ಪಟೇಲ್
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬಿಡ್ಡಿಂಗ್ ಬೆಲೆ: 10.75 ಕೋಟಿ ರೂ

ಕ್ವಿಂಟನ್ ಡಿ ಕಾಕ್
ತಂಡ: ಲಕ್ನೋ ಸೂಪರ್ ಜೈಂಟ್ಸ್‌
ಬಿಡ್ಡಿಂಗ್ ಬೆಲೆ: 6.75 ಕೋಟಿ ರೂ

ಮನೀಶ್ ಪಾಂಡೆ
ತಂಡ: ಲಕ್ನೋ ಸೂಪರ್ ಜೈಂಟ್ಸ್‌
ಬಿಡ್ಡಿಂಗ್ ಬೆಲೆ: 4.6 ಕೋಟಿ ರೂ

ಜಾಸೊನ್ ಹೋಲ್ಡರ್
ಲಕ್ನೋ ಸೂಪರ್ ಜೈಂಟ್ಸ್‌
ಬಿಡ್ಡಿಂಗ್ ಬೆಲೆ: 8.75ಕೋಟಿ ರೂ

ದೀಪಕ್ ಹುಡಾ
ತಂಡ: ಲಕ್ನೋ ಸೂಪರ್ ಜೈಂಟ್ಸ್‌

ಬಿಡ್ಡಿಂಗ್ ಬೆಲೆ: 5.75 ಕೋಟಿ ರೂ

ಡೇವಿಡ್ ವಾರ್ನರ್
ತಂಡ: ಡೆಲ್ಲಿ ಕ್ಯಾಪಿಟಲ್ಸ್
ಬಿಡ್ಡಿಂಗ್ ಬೆಲೆ: 6.25 ಕೋಟಿ ರೂ

ಮೊಹಮ್ಮದ್ ಶಮಿ
ತಂಡ: ಗುಜರಾತ್ ಟೈಟನ್ಸ್

ಬಿಡ್ಡಿಂಗ್ ಬೆಲೆ: 6.25 ಕೋಟಿ ರೂ

ಜಾಸನ್ ರಾಯ್
ತಂಡ: ಗುಜರಾತ್ ಟೈಟನ್ಸ್
ಬಿಡ್ಡಿಂಗ್ ಬೆಲೆ: 2 ಕೋಟಿ ರೂ

ರಾಬಿನ್ ಉತ್ತಪ್ಪ
ತಂಡ: ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್ ಬೆಲೆ: 2 ಕೋಟಿ ರೂ

ಡ್ವೇನ್ ಬ್ರಾವೋ
ತಂಡ: ಚೆನ್ನೈ ಸೂಪರ್ ಕಿಂಗ್ಸ್

ಬಿಡ್ಡಿಂಗ್ ಬೆಲೆ: 4.40 ಕೋಟಿ ರೂ

ಮನೀಶ್ ಪಾಂಡೆ
ತಂಡ: ಲಖನೌ ಸೂಪರ್ ಜೈಂಟ್ಸ್
ಬಿಡ್ಡಿಂಗ್ ಬೆಲೆ: 4.6 ಕೋಟಿ ರೂ

ಶಿಮ್ರಾನ್ ಹೆಟ್ಮೆಯರ್
ತಂಡ: ರಾಜಸ್ಥಾನ್ ರಾಯಲ್ಸ್ 
ಬಿಡ್ಡಿಂಗ್ ಬೆಲೆ: 8.5 ಕೋಟಿ ರೂ

ದೇವದತ್ತ ಪಡಿಕ್ಕಲ್
ತಂಡ: ರಾಜಸ್ಥಾನ್ ರಾಯಲ್ಸ್ 
ಬಿಡ್ಡಿಂಗ್ ಬೆಲೆ: 7.5 ಕೋಟಿ ರೂ

ಹಿಂದಿನ ಲೇಖನಹಿಜಾಬ್ ವಿವಾದದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಅನಗತ್ಯ ಚರ್ಚೆ ಬೇಡ : ವಿಶ್ವೇಶ್ವರ ಹೆಗಡೆ ಕಾಗೇರಿ
ಮುಂದಿನ ಲೇಖನಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್