ಮನೆ ಸುದ್ದಿ ಜಾಲ ಇಸ್ರೋದ ಈ ಸಾಲಿನ ಮೊದಲ ಉಡಾವಣೆ ಯಶಸ್ವಿ: ಮೂರು ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52

ಇಸ್ರೋದ ಈ ಸಾಲಿನ ಮೊದಲ ಉಡಾವಣೆ ಯಶಸ್ವಿ: ಮೂರು ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52

0

ಹೈದರಾಬಾದ್ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ಈ ವರ್ಷದ ಮೊದಲ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದು, 3 ಉಪಗ್ರಹಗಳನ್ನು ಹೊತ್ತ PSLV-C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು. PSLV-C52 ರಾಕೆಟ್ (ಪೋಲಾರ್ ಉಪಗ್ರಹ ಉಡಾವಣಾ ವಾಹನ)ನಲ್ಲಿ ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದರೊಂದಿಗೆ ಇತರ ಎರಡು ರೈಡ್ ಶೇರ್ ಉಪಗ್ರಹಗಳನ್ನು ಕೂಡ ಪಿಎಸ್ ಎಲ್ ವಿ-ಸಿ52 ಕಕ್ಷೆಗೆ ಸಾಗಿಸಿತು.

ಗ್ರಹದಿಂದ ಸುಮಾರು 529 ಕಿಲೋಮೀಟರ್ ಎತ್ತರದಲ್ಲಿರುವ ಸನ್-ಸಿಂಕ್ರೋನಸ್ ಕಕ್ಷೆಯಲ್ಲಿ ಇಒಎಸ್-04 ಅನ್ನು ನಿಯೋಜಿಸಲು ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು. ನಾಲ್ಕು ಹಂತದ ರಾಕೆಟ್ ವಿದ್ಯಾರ್ಥಿ ಉಪಗ್ರಹ ಇನ್ ಸ್ಪೈರ್ ಸ್ಯಾಟ್ ಮತ್ತು ಇನ್ ಸ್ಯಾಟ್-2ಡಿಟಿ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆಯೊಂದಿಗೆ ಮೇಲಕ್ಕೆತ್ತಲ್ಪಟ್ಟಿತು.