ಮನೆ ರಾಜಕೀಯ ಉಕ್ರೇನ್ ತೊರೆಯಲು ಅಮೆರಿಕಾ ನಾಗರಿಕರಿಗೆ ಜೋ ಬೈಡನ್ ಸೂಚನೆ

ಉಕ್ರೇನ್ ತೊರೆಯಲು ಅಮೆರಿಕಾ ನಾಗರಿಕರಿಗೆ ಜೋ ಬೈಡನ್ ಸೂಚನೆ

0
Former U.S. Vice President Joe Biden is seen during the annual Munich Security Conference in Munich, Germany February 16, 2019. REUTERS/Andreas Gebert - RC1740FFF0A0

ವಾಷಿಂಗ್ಟನ್​: ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣದಿಂದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಗುರುವಾರ ಅಮೆರಿಕದ ನಾಗರಿಕರಿಗೆ ತಕ್ಷಣವೇ ಉಕ್ರೇನ್ ತೊರೆಯಲು ಸೂಚನೆ ನೀಡಿದ್ದಾರೆ.

ಉಕ್ರೇನ್​ನಲ್ಲಿರುವ ಅಮೆರಿಕ ನಾಗರಿಕರಿಗೆ ಬೈಡೆನ್​ ವಾರ್ನ್, ಉಕ್ರೇನ್​ ತೊರೆಯುವಂತೆ ಅಮೆರಿಕ ನಾಗರಿಕರಿಗೆ ಬೈಡೆನ್​ ವಾರ್ನ್, ಯುಎಸ್ ಅಧ್ಯಕ್ಷ ಜೋ ಬೈಡೆನ್ ಸುದ್ದಿ,​ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಭೀತಿಯ ನಡುವೆ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ​ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 1,700 ಸೈನಿಕರನ್ನು ಒಳಗೊಂಡ ಯುಎಸ್ ಪಡೆಗಳು ಉಕ್ರೇನ್ ಗಡಿ ಸಮೀಪವಿರುವ ಆಗ್ನೇಯ ಪೋಲೆಂಡ್‌ಗೆ ಬಂದಿಳಿದಿವೆ. ಉಕ್ರೇನ್ ಸುತ್ತಲೂ ರಷ್ಯಾ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ. ಅವರ ಚಲನವಲನವು ಅಸಹಜ ರೀತಿಯಲ್ಲಿದೆ ಎಂದು ಅಮೆರಿಕ ಮತ್ತು ನ್ಯಾಟೋ ತಿಳಿಸಿವೆ.

ಜೋ ಬೈಡೆನ್ ಮತ್ತು ಯುರೋಪಿಯನ್ ನಾಯಕರ ಎಚ್ಚರಿಕೆಯ ನಡುವೆಯೂ ಪುಟಿನ್ ತಮ್ಮ 1 ಲಕ್ಷ ಪಡೆಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದ್ದಾರೆ ಎಂಬ ಮಾಹಿತಿ ಇದೆ. ಶೀಘ್ರದಲ್ಲಿಯೇ ಅದು ಉಕ್ರೇನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಕಾಣುತ್ತಿದೆ.