ಮನೆ ಅಪರಾಧ ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವಾಚರ್ ಮೇಲೆ ಕಾಡಾನೆ ದಾಳಿ

ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ವಾಚರ್ ಮೇಲೆ ಕಾಡಾನೆ ದಾಳಿ

0

ಚಾಮರಾಜನಗರ: ಗಸ್ತಿನಲ್ಲಿದ್ದ ಫಾರೆಸ್ಟ್‌ ವಾಚರ್ ಮೇಲೆ ಕಾಡಾನೆ ದಾಳಿ ನಡೆಸಿದ್ದು,  ವಾಚರ್ ಗೆ ತೀವ್ರತರವಾದ ಗಾಯಗಳಾಗಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ಅರಣ್ಯ ವಲಯದ ಕರಿಕಲ್ಲು ಮುಂಟಿಯಲ್ಲಿ ನಡೆದಿದೆ.

ಅರಣ್ಯ ವೀಕ್ಷಕ ಜಡೆಯಾ(58) ಆನೆ ದಾಳಿಗೊಳಗಾದ ವ್ಯಕ್ತಿಯಾಗಿದ್ದಾರೆ.

ಪುಣಜನೂರು ಅರಣ್ಯ ವಲಯದ ಕರಿಕಲ್ಲು ಮುಂಟಿ ಎಂಬಲ್ಲಿ ಗಸ್ತು ತಿರುಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ್ದು, ಮೂವರಲ್ಲಿ ಇಬ್ಬರು ಓಡಿ ಹೋಗಿ ದಾಳಿಯಿಂದ ಪಾರಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ವಾಚರ್ ಜಡೆಯಾರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಿದ್ದಾರೆ.

ಹಿಂದಿನ ಲೇಖನಉಕ್ರೇನ್ ತೊರೆಯಲು ಅಮೆರಿಕಾ ನಾಗರಿಕರಿಗೆ ಜೋ ಬೈಡನ್ ಸೂಚನೆ
ಮುಂದಿನ ಲೇಖನಕಂದಕಕ್ಕೆ ಉರುಳಿದ ಬಸ್: 20 ಮಂದಿ ಸಾವು, 33 ಜನರಿಗೆ ಗಾಯ