ಮನೆ ಮನರಂಜನೆ ಜಾನ್ ಅಬ್ರಹಾಂ ನಟನೆಯ ʼವೇದಾʼ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

ಜಾನ್ ಅಬ್ರಹಾಂ ನಟನೆಯ ʼವೇದಾʼ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್

0

ಮುಂಬಯಿ: ನಟ ಜಾನ್ ಅಬ್ರಹಾಂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼವೇದಾʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಹೊಸ ಪೋಸ್ಟರ್‌ ಮಾಡುವ ಮೂಲಕ ಸಿನಿಮಾದ ಬಿಡುಗಡೆ ದಿನಾಂಕವನ್ನು ರಿವೀಲ್‌ ಮಾಡಲಾಗಿದೆ.

ಈ ಹಿಂದೆ ಜಾನ್‌ ಅಬ್ರಹಾಂ ಅವರೊಂದಿಗೆ ʼಬಾಟ್ಲಾ ಹೌಸ್‌ʼ ಸಿನಿಮಾವನ್ನು ಮಾಡಿದ್ದ ನಿಖಿಲ್‌ ಅಡ್ವಾಣಿ ಅವರು ಮತ್ತೆ ಜಾನ್‌ ಅಬ್ರಹಾಂ ಜೊತೆ ʼವೇದಾʼ ಮೂಲಕ ಜೊತೆಯಾಗುತ್ತಿದ್ದಾರೆ.

ಸಮಾಜದಲ್ಲಿ ನಡೆದ ಘಟನೆಗಳ ಪ್ರತಿಬಿಂಬವನ್ನೇ ʼವೇದಾʼ ದಲ್ಲಿ ಹೇಳಲಾಗಿದೆ. ಇದೊಂದು ಆ್ಯಕ್ಷನ್-ಡ್ರಾಮಾ ಸಿನಿಮಾವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಸಿನಿಮಾದ ಪೋಸ್ಟರ್‌ ಜೊತೆಗೆ ರಿಲೀಸ್‌ ಡೇಟ್‌ ನ್ನು ಅನೌನ್ಸ್‌ ಮಾಡಲಾಗಿದೆ. ಇದೇ ಜುಲೈ 12 ರಂದು ಸಿನಿಮಾ ತೆರೆ ಕಾಣಲಿದೆ.ʼಆಕೆಗೆ ರಕ್ಷಕಬೇಕಿತ್ತು, ಆದರೆ ಅವಳಿಗೆ ಆಯುಧವೇ ಸಿಕ್ಕಿತುʼ ಎಂದು ಪೋಸ್ಟರ್‌ ಕೆಳಗೆ ಮಾಸ್‌ ಅಂಶವನ್ನು ಸಾರುವ ಕ್ಯಾಪ್ಷನ್‌ ನ್ನು ಬರೆಯಲಾಗಿದೆ.

ಜೀ ಸ್ಟುಡಿಯೋಸ್‌ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಸಿನಿಮದಲ್ಲಿ ಜಾನ್‌ ಅಬ್ರಹಾಂ ಜೊತೆ ಶಾರ್ವರಿ ಮತ್ತು ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದಾದ ಬಳಿಕ ಜಾನ್‌ ಅಬ್ರಹಾಂ ಅವರು, ಶಿವಂ ನಾಯರ್ ಅವರ ‘ದಿ ಡಿಪ್ಲೋಮ್ಯಾಟ್’ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿನ ಲೇಖನತೆರಿಗೆ ಹಂಚಿಕೆ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಟೀಕೆ: ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ? – ಸಿಎಂ ಪ್ರಶ್ನೆ
ಮುಂದಿನ ಲೇಖನಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ