ಅತ್ತೆಗೆ ಚಿಕಿತ್ಸೆ ಕೊಟ್ಟಿದ್ದಕ್ಕೆ ಡಾಕ್ಟರಿಗೆ ಸನ್ಮಾನ ಮಾಡಿದ.
ಡಾಕ್ಟರು : ಇದೆಲ್ಲ ಯಾಕಯ್ಯ ನಾನು ನನ್ನ ಕರ್ತವ್ಯ ಮಾಡಿದೆ ಅಷ್ಟೇ.
ಆತ : ಹೌದು ಡಾಕ್ಟರ್, ನಾನು ಚಿಕಿತ್ಸೆಗೆಅಂತ ಕರ್ಕೊಂಡು ಹೋದ ಡಾಕ್ಟರೆಲ್ಲ ಅವಳ ಕಾಯಿಲೆಗೆ ಗುಣ ಮಾಡಿಬಿಡ್ತಿತ್ತು. ಬಂದ ಮೊದಲನೇ ಸಲವೇ ಅವಳನ್ನು ಕೈಲಾಸ ಸೇರಿಸಿಬಿಟ್ರಿ.
***
“ಅಲ್ಲಾ ಸಾರ್, ನಿಮ್ಮ ಹೆಂಡ್ತಿನೇ ಡೆಂಟಿಸ್ಟು. ಅವರ ಕೈಯಲ್ಲಿ ಹಲ್ಲು ಕೇಳಿಸೋ ಬದಲು ನಮ್ಮ ಕ್ಲಿನಿಕ್ಗೆ ಬಂದಿದ್ದೀರಲ್ಲ?” ಡಾಕ್ಟರ್ ಮೀನಾ ಆಶ್ಚರ್ಯಪಟ್ಟರು.
“ಅದು ಹಾಗಲ್ಲ ಡಾಕ್ಟರ್, ನಮ್ಮಾಕೆ ಎದುರಿಗೆ ನನ್ನ ಬಾಯಿ ತೆಗಿಯಬಾರದು. ಅಂತ ನನ್ನ ಅತ್ತೆ ನನ್ನಿಂದ ಭಾಷೆ ತೆಗೆದುಕೊಂಡಿದ್ದಾರೆ.”
***
ಸಿದ್ದು : ನಿನಗೆ ರಾಮ ಅಂದ್ರೆ ಇಷ್ಟಾನೋ, ಕೃಷ್ಣ ಅಂದ್ರೆ ಇಷ್ಟಾನೋ,
ದೇವು : ಇಬ್ಬರು ಅಲ್ಲ, ಆಂಜನೇಯ ಅಂದ್ರೆ ಇಷ್ಟ.
ಸಿದ್ದು : ಯಾಕೆ ?
ದೇವು : ಯಾರ ಬಲವಂತಕ್ಕೂ ಮದುವೆಯಾಗದೆ ಹಾಯಾಗಿದ್ದಾನಲ್ಲ ಅದಕ್ಕೆ.
***
ಕಿಟ್ಟು : ಈಗಿನ ಬಹಳಷ್ಟು ಹುಡುಗಿಯರಿಗೆ ಮದುವೆಯನ್ನೇ ಮಾಡಿಕೊಳ್ಳುವ ಮನಸ್ಸಿಲ್ಲ.
ರಾಘವ : ನಿನಗೆ ಹೇಗೆ ತಿಳಿಯಿತು ?
ಕಿಟ್ಟು : ನಾನು ಅವರನ್ನು ಮದುವೆಯಾಗಲು ಕೇಳಿಕೊಂಡಾಗ ಅವರು ಹಾಗೆಂದರು.