ಮೇಷ್ಟ್ರು : ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರೂ ಅನ್ನೋ ಗಾದೆಗೆ ಒಂದು ಉದಾಹರಣೆ ಕೊಡಿ.
ಹುಡುಗ : ನೀವು ಹೆಡ್ ಮಾಸ್ಟರ್ ಹತ್ರ ಬೈಸ್ಕೊಂಡು, ತಲೆ ಬಿಸಿ ಮಾಡ್ಕೊಂಡು ಮನೆಗೆ ಹೋಗಿ, ನಿಮ್ಮ ಹೆಂಡ್ತಿಗೆ ಹೊಡಿಯೋದು.
***
ಶಿಕ್ಷಕರು : ಸೋಮು, ನೀನು ಬರೆದ ಈ ಬರಹದೊಳಗೆ ನೂರೊಂದು ತಪ್ಪು ಮಾಡುವಿರಿ. ಇದನ್ನು ನಿನ್ನ ತಂದೆಗೆ ತೋರಿಸುತ್ತೇನೆ ನೋಡು.
ವಿದ್ಯಾರ್ಥಿ : ಬೇಡಿ ಸಾರ್, ಅದನ್ನು ಅವರೇ ಬರೆದುಕೊಟ್ಟದ್ದು.
***
ಟೀಚರ್ : ಬಾಲು, ಸ್ಕೂಲಿಗೆ ಯಾಕೆ ಬರ್ತೀಯಾ?
ಬಾಲು : ವಿದ್ಯಾಗೋಸ್ಕರ ಸಾರ್.
ಟೀಚರ್ : ಮತ್ಯಾಕೆ ಪಾಠ ಕೇಳದು ಬಿಟ್ಟು ಮಲ್ಕೊಂಡ್ ಇದ್ದೀಯಾ?
ಬಾಲು : ಇವತ್ತು ವಿದ್ಯಾ ಬಂದಿಲ್ಲ ಸರ್!
***
ಗೆಳೆಯ : ಯಾಕೆ ಸೋಮು, ಹೊಸ ನಾಯಿ ಕಾಣ್ತಾಇಲ್ಲ ?
ಸೋಮು : ಅದನ್ನ ಅರ್ಧ ಬೆಲೆಗೆ ಮಾರಿಬಿಟ್ಟೆ. ಅದು ನನ್ನ ಹೆಂಡ್ತಿ ಪಕ್ಷವಹಿಸಿ ಬೊಗಳುತ್ತಾ ಇತ್ತು.
ಗೆಳೆಯ : ಅಂದರೆ ?
ಸೋಮು : ನನ್ನ ಕಡೆ ಸಂಬಂಧಿಗಳು ಬಂದರೆ ಹಾಳಾದು ಬೊಗೊಳದೇನು, ಹಾರೋದೇನು, ಗುರ್ ಅನ್ನೋದೇನು, ಆದರೆ ಅವಳ ತವರು ಮನೆಯಿಂದ ಯಾರೇ ಬಂದರೂ ಬಾಲ ಅಲ್ಲಾಡಿಸಿ ಸ್ವಾಗತ ಕೋರುತ್ತಾ ಇತ್ತು.