ಶೋಭಾ : ಆಕೆ ಹೇಗೆ ಸತ್ತರು ?ಏನಾದರೂ ಕಾಯಿಲೆ ಇತ್ತೇ ?
ಶೀಲಾ : ಅದೇನಿಲ್ಲ. ಅಂತಿಮ ಸಂಸ್ಕಾರಕ್ಕೆ ಬೇಕಾಗುವ ಸಾಮಗ್ರಿಗಳು ಶೇಕಡ 50ರ ರಿಯಾಯಿತಿ ಮಾರಾಟವಾಗುತ್ತಿತ್ತು. ಆಕೆ ಅದರ ಲಾಭ ಪಡೆದುಕೊಂಡಳು
****
ಸೀತಾ : ನಮ್ಮ ಬದುಕಿಗೆ ಗಂಡಸರು ಅನಿವಾರ್ಯವಾ ?
ಶಾಂತಿ : ಮತ್ತೆ ಅವರಿಲ್ಲದಿದ್ದರೆ ನಾವು ಇನ್ಯಾರ ಹತ್ರ ಜಗಳ ಆಡೋದು ?
****
ನಡುರಾತ್ರಿಯಲ್ಲಿ ಮನೆಗೆ ಬಂದ ಗಂಡ ಬಾಗಿಲು ತಟ್ಟಿದ ಹೆಂಡತಿ ಬಾಗಿಲು ತೆರೆದಳು.
ಹೆಂಡತಿ : ನೀವು ಈ ಸಮಯದಲ್ಲಾದರೂ ಮನೆಯನ್ನು ನೆನಪಿಟ್ಟು ಬಂದಿರಲ್ಲ! ಇನ್ನೆಲ್ಲೂ ಹೋಗದೆ ?
ಗಂಡ : “ಇನ್ನೆಲ್ಲಿ ಹೋದರೂ ಬೇರೆ ಯಾರು ಆ ಸಮಯದಲ್ಲಿ ಬಾಗಿಲು ತೆಗೆಯುವುದಿಲ್ಲ”
***
ಜಡ್ಜ್ : ನಿನ್ನ ಲವರ್ ಬಾಲುವನ್ನು ಯಾಕಮ್ಮ ಕೊಂದೆ ?
ಹುಡುಗಿ : ಸುಮ್ಮನೆ
ಜಡ್ಜ್ : ಹಾಗಂದ್ರೆ ?!
ಹುಡುಗಿ : ʼಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ…ʼ ಅಂತ ಯಾವಾಗಲೂ ಹೇಳ್ತಾ ಇದ್ದ ಸರ್, ಅದಕ್ಕೆ ಕೊಂದುಬಿಟ್ಟೆ….!
****
ಕಂಡಕ್ಟರ್ : ಏನಮ್ಮಾ ಹುಡುಗಿ 12 ವರ್ಷ ಆಗದೆ ಇರುವವರಿಗೆ ಅರ್ಧ ಚಾರ್ಜು ನಿನ್ನ ವಯಸ್ಸೆಷ್ಟು ?
ಹುಡುಗಿ : 11 ವರ್ಷ
ಕಂಡಕ್ಟರ್ : ಹಾಗಾದ್ರೆ 12 ಆಗುವುದು ಯಾವಾಗ ?
ಹುಡುಗಿ : ಬಸ್ಸಿನಿಂದ ಇಳಿದ ತಕ್ಷಣ.
***
“ಈ ಅಸ್ತಿಪಂಜರಾನ ಯಾಕೆ ಇಲ್ಲಿ ಇಟ್ಟಿದ್ದೀರಿ ? ಡಾಕ್ಟರನ್ನು ಕೇಳಿದರು ಬಂದರು.
ʼʼಆ ಮನುಷ್ಯನೇ ನನ್ನ ಮೊದಲ ಗಿರಾಕಿ” ಅಂದರು ಡಾಕ್ಟರ್.