ಆಪರೇಷನ್ ಗೆ 50 ಸಾವಿರ ಆಗುತ್ತೆ, ಅಂತ ಹೇಳಿದ್ನಲ್ಲ ತಂದಿದ್ದೀರಾ?” ಡಾಕ್ಟರ್ ರೋಗಿಯನ್ನ ಕೇಳಿದರು.
“ನಿಮಗೆ 50 ಸಾವಿರ ಕೊಡುವಂತೆ ನನ್ನ ಉಯಿಲಿನಲ್ಲಿ ಬರೆದಿದ್ದೇನೆ” ಅಂದರು ಬಂದ ರೋಗಿ.
***
ಗಂಡ : ಲೇ ಅಕಸ್ಮಾತ್ ನಾನು ಸತ್ತೋದ್ರೆ ನೀನು ಏನೇ ಮಾಡುತ್ತೀಯಾ?
ಹೆಂಡ್ತಿ : ಅಪಶಕುನ ಯಾಕ್ರಿ ನುಡಿತೀರಾ.. ಒಂದು ವೇಳೆ ಹಾಗೇನಾದರೂ ಆದ್ರೆ ನಾನು ನನ್ನ ತಂಗಿ ಜೊತೆ ಇರ್ತೀನಿ… ಇರಿ…. ಒಂದು ವೇಳೆ ನಿಮಗಿಂತ ಮುಂಚೆ ನಾನೇ ಸತ್ತೋದ್ರೆ ನೀವು ಏನ್ರೀ ಮಾಡ್ತೀರಾ ?
ಗಂಡ : ನಾನು ನಿನ್ನ ತಂಗಿ ಜೊತೆ ಇರ್ತೀನಿ ಬಿಡು.
***
ಮೇಷ್ಟ್ರು : ನಿಮ್ಮಲ್ಲಿ ಯಾರಾದರೂ ಫೇಲಾದರೆ ನಮಗೆ ಅವಮಾನ ಅನ್ನಿಸುತ್ತೆ, ಅದಕ್ಕೆ ಯಾರು ಫೇಲಾಗಬಾರದು.
ಹುಡುಗ : ಹಾಗಾದ್ರೆ ನೀವು ಯಾರನ್ನು ಫೇಲ್ ಮಾಡದೇ ಎಲ್ಲರನ್ನು ಪಾಸ್ ಮಾಡಿಬಿಡಿ.
***
ಡಾಕ್ಟರ್ : ಶ್ರೀಮತಿಯವರೇ, ನಿಮ್ಮ ಪತಿಯವರಿಗೆ ಮನಸ್ಸಿಗೆ ಶಾಂತಿ ಹಾಗೂ ವಿಶ್ರಾಂತಿ ತುಂಬಾ ಅವಶ್ಯಕತೆಯಾಗಿದೆ. ನಿದ್ರೆ ಮಾತ್ರೆಗಳನ್ನ ಬರೆದುಕೊಡುತ್ತೇನೆ.
ಶ್ರೀಮತಿ : ಯಾವಾಗ ಎಷ್ಟು ಮಾತ್ರೆಗಳನ್ನು ಕೊಡಬೇಕು ಹೇಳಿ ?
ಡಾಕ್ಟರ್ : ದಿನಕ್ಕೆ ನಾಲ್ಕು ಮಾತ್ರೆಗಳನ್ನ ನೀವು ತೆಗೆದುಕೊಳ್ಳಿ ಎಲ್ಲಾ ಸರಿಹೋಗುತ್ತದೆ.
***
ಟೀಚರ್ : ಈಗ ಏನ್ ಮಾಡ್ಕೊಂಡಿದ್ದೀಯಾ ?
ಬಾಲು : ಸಿ.ಎ.
ಟೀಚರ್ : ಹ್ಹೋ! ಹೌದಾ ! ಚಾರ್ಟೆಡ್ ಅಕೌಂಟೆಂಟಾ ?
ಬಾಲು : ಅಲ್ಲ ಸರ್, ಚಕ್ಕುಲಿ ಅಂಗಡಿ!