‘ನ್ಯಾಯಾಧೀಶ : ಕೊಲೆ ನಡೆದದ್ದನ್ನು ನೋಡಿದ ನೀವು ಆ ಕೊಲೆಯನ್ನ ತಡೆಯಲು ಯಾಕೆ ಪ್ರಯತ್ನಿಸಲಿಲ್ಲ ?
ಕಕ್ಷಿ : ಸ್ವಾಮಿ, ನಾನು ತಡೆಯಲು ಹೋಗಿದ್ದರೆ ಸಾಕ್ಷಿ ಹೇಳಲು ನಿಮ್ಮ ಮುಂದೆ ಇರುತ್ತಿರಲಿಲ್ಲ.
***
ವಕೀಲ : ನಾನು ನಿನ್ನ ಕೇಸ್ ನ ತೆಗೆದುಕೊಂಡರೆ ನನಗೆ ಫೀಸು ಕೊಡಲು ನಿನ್ನ ಕೈಲಿ ಸಾಧ್ಯವಾ ?
ಕಕ್ಷಿದಾರ : ನನ್ನ ಹತ್ತಿರ ಇರುವುದು ಅಂದರೆ ಒಂದೇ ಒಂದು ಕಾರು ಸರ್.
ವಕೀಲ : ಸರಿ, ನಿನ್ನ ಮೇಲೆ ಯಾವ ಆಪಾದನೆ ಹೊರೆಸಿದ್ದಾರೆ ಪೊಲೀಸರು.
ಕಕ್ಷಿದಾರ : ಆ ಕಾರನ್ನ ಕದ್ದೆ ಅಂತ.
***
ಶಿವ : ಯಾಕಯ್ಯ ಕಾರು ಪಾರ್ಕ್ ಮಾಡಿ ಅದರ ಎರಡು ಚಕ್ರ ಬಿಚ್ಚುತ್ತಾ ಇದ್ದೀಯಾ ?
ಬಾಲು : ಯಾಕೆ ಬೋರ್ಡ್ ಕಾಣಿಸ್ತಿಲ್ವ ? parking for two wheelers only ಅಂತಿದೆ.
***
ಗಿರೀಶ : ಮದುವೆಯಾದ ಇಷ್ಟು ವರ್ಷದಲ್ಲಿ 10-15 ಸಂದರ್ಭದಲ್ಲಿ ನೀವು ಬಹಳ ಖುಷಿಯಾಗಿದ್ದೆ ಅಂದ್ಯಲ್ಲ ಯಾವುದದು ?
ತಿಮ್ಮ : ನನ್ನ ಹೆಂಡ್ತಿ ತವರುಮನೆಗೆ ಹೋದಾಗ ?
***
“ನಾವು ಮಾತನಾಡುವ ಮನೆ ಮಾತಿಗೆ-ಮಾತೃಭಾಷೆ ಎಂದು ಏಕೆ ಅನ್ನುವರು ?”
“ಬಹುಶಃ ಮನೆಯಲ್ಲಿ ತಂದೆಗಿಂತ ತಾಯಿಯ ಮಾತೇ ಹೆಚ್ಚು ಕೇಳಿ ಬರುತ್ತಿರುವುದರಿಂದ !”