ಬಾಲು : ಐ ಲವ್ ಯು
ಹುಡುಗಿ : ನಿನ್ನ ಸಂಬಳ ಎಷ್ಟು?
ಬಾಲು :ಏಳು ಸಾವಿರ
ಹುಡುಗಿ : ಅದು ನಾನು ದಿನ ಹಚ್ಚೋ ಸೋಪಿಗೂ ಸಾಕಾಗಲ್ಲ!
ಬಾಲು : ಸಾರಿ, ನೀನು ಅಷ್ಟೊಂದು ಗಲೀಜು ಅಂತ ನನಗೆ ಗೊತ್ತಿರಲಿಲ್ಲ.
++++
ಬಿಕ್ಷುಕ : ಸ್ವಾಮಿ, 10 ಪೈಸೆ ಕೊಡಿ.
ದಾರಿಹೋಕ : 10 ಪೈಸೆಗೆ ಏನಯ ಸಿಗುತ್ತೆ ? ಇನ್ನು ಹೆಚ್ಚು ಬೇಡೋಕ್ಕಾಗಲ್ವೆ ?
ಭಿಕ್ಷುಕ : ನಾನು ಜನರ ಯೋಗ್ಯತೆ ತಿಳಿದು ಕೇಳ್ತೀನಿ.
++++
“ಹಾಕಿದ ಹಾರಗಳನ್ನ ತೆಗೆಯದೆ ಸಚಿವರು ಹಾಗೆ ಯಾಕೆ ಇದ್ದಾರೆ ?”
“ ಹಾರ ತೆಗೆದರೆ ಮತ್ತೆ ಮತ್ತೆ ಅದನ್ನೇ ತಂದು ಹಾಕಿದ್ದಾರಂತೆ !” ಬಂದು ಉತ್ತರ.
++++
ರಘು : ಯಾಕೆ ಸರ್ ಕುದುರೆ ಜೂಜಿಗೆ, ನಿಮ್ಮ ಅತ್ತೇನು ಕರ್ಕೊಂಡ್ ಬಂದಿದ್ದೀರಾ ?
ರಾಮು : ನನಗೆ ಜ್ಯೋತಿಷಿ ಹೇಳಿದ್ದಾರೆ- ನೀನು ಜೂಜಿಗೆ ಹೋದರೆ ಎಲ್ಲಾನು ಕಳ್ಕೊಂಡು ಬರ್ತೀಯಾ ಅಂತ.
++++
ಬಾಸ್ : 8 ಗಂಟೆ ಹಿಡಿಯೋ ಕೆಲಸವನ್ನು ಇಂದು ನಿಮಗೆ ಕೊಟ್ಟು ಇದನ್ನು ಒಂದೇ ಗಂಟೇಲಿ ಮಾಡ್ಕೊಂಡು ಬನ್ನಿ ಅಂದ್ರೆ ನಿಮಗೆ ಏನ್ ಅನಿಸುತ್ತೆ ?
ಸತೀಶ್ : ನಿಮಗೆ ತಲೆ ಕೆಟ್ಟಿದೆ ಅನ್ಸುತ್ತೆ.
++++
ಮದುವೆಯ ಮೊದಲಿತ್ತು – ಆಕರ್ಷಣೆ
ಮದುವೆ ನಂತರ – ಘರ್ಷಣೆ.
++++
ಬಾಲು : ಮಿಸ್, ನೆನ್ನೆ ನೀವು ನಮ್ಮ ಅಪ್ಪನ ಮೊಬೈಲಿಗೆ ಕಾಲ್ ಮಾಡಿದ್ರಾ?
ಮಿಸ್ : ನಾನು ನೆನ್ನೆ ಯಾರಿಗೂ ಕಾಲ್ ಮಾಡಿಲ್ಲವಲ್ಲ !
ಬಾಲು : ಹಾಗಾದರೆ ನನ್ನ ಅಪ್ಪನ ಮೊಬೈಲ್ ನಲ್ಲಿ ಒಂದು “ಮಿಸ್ ಕಾಲ್” ಅಂತ ಹಾಗೆ ಹೇಗೆ ಬಂತು.
++++
“ಅಲ್ಲಾ ಕಣೇ, ನೀನ್ ಇಷ್ಟೊಂದು ಸಾಲ ಮಾಡಿದ್ದೀಯಲ್ಲಾ ನನ್ನನ್ನೂ ಕೇಳದಂತೆ. ರಾತ್ರಿ ಕಾಲ ನಿಜವಾಗ್ಲೂ ನಿನಗೆ ನಿದ್ದೆ ಬರುತ್ತದೇನೇ ?” ಎಂದು ಗಂಡ ಹೆಂಡತಿಗೆ ಹೇಳಿದನು.