ಟೀಚರ್ : ʼನೆರೆಹೊರೆʼ ಎಂದರೇನು ?
ಬಾಲು : ಸರ್, ಅಕ್ಕ-ಪಕ್ಕದ ಮನೆಯವರು ʼನೆರೆʼ, ಅವರು ಆಗಾಗ ಬಂದು ಕಾಫಿ ಪುಡಿ, ಸಕ್ಕರೆ, ಉಪ್ಪು, ಕೇಳಿದರೆ ʼಹೊರೆʼ ಸರ್…
****
“ನೀನು ಯಾಕೆ ಭಿಕ್ಷೆ ಬೇಡ್ತಿ?”
“ಕುಡಿಯೋಕ್ಕೆ ಹಣ ಬೇಕು.”
“ಯಾಕೆ ಕುಡೀತಿ”
“ಭಿಕ್ಷೆ ಬೇಡೋಕೆ ಧೈರ್ಯ ಬರಲಿ ಅಂತ.”
****
ನಿನ್ನೆ ರಾತ್ರಿ ನಿಮ್ಮ ಮನೆ ಮುಂದೆ ಮಲಗಿದ್ದ ನಾಯಿ ನನ್ನ ಕಾಲನ್ನ ಕಚ್ಚಿ ಬಿಡ್ತು.
“ ನಮ್ಮ ಮನೇಲಿ ನಾಯಿ ಎಲ್ಲಿಯದು ? ಇಲ್ಲೇ ನಾವೇ ಮಲಗಿದ್ದೆ” ಅಂದರೂ ಮನೆಯಾತ.
****
ಡಾಕ್ಟರ್ : ನಿಮ್ಮ ಚಿಕಿತ್ಸೆಗೆ ಎರಡು ಬಾಟಲು ರಕ್ತ ಬೇಕು
ರಾಜಕಾರಣಿ : ನನ್ನ ನೆಂಟರಿದ್ದಾರಲ್ಲ ಅವರಲ್ಲಿ ಯಾರದ್ದಾದ್ರೂ ರಕ್ತ ತಗೊಳ್ಳಿ.
ಡಾಕ್ಟರ್ : ಹಾಗೆಲ್ಲ ಪರೀಕ್ಷೆ ಮಾಡದೆ ತಗೊಳೋಕ್ಕಾಗಲ್ಲ. ಮ್ಯಾಚ್ ಆಗಬೇಡವೇ ?
ರಾಜಕಾರಣಿ : ತಗೊಳಿ ಡಾಕ್ಟರೇ.. ಮ್ಯಾಚ್ ಆಗುತ್ತೆ. ಯಾಕಂದ್ರೆ ಅವರೆಲ್ಲ ನನ್ನ ರಕ್ತ ಹೀರೆ ಬೆಳೆದಿರೋದು.
****
ಸ್ವಾಮಿ : ಈಗಿನ ಕಾಲದ ಹುಡುಗಿಯರು ತವರು ಮನೆಗೆ ಹೋಗೋದು ಕಮ್ಮಿ ಅಲ್ವಾ?
ಗುರು : ಹೌದು, ನನ್ನ ಹೆಂಡ್ತಿ ಅವಳ ಕಡೆ ನೆಂಟ್ರು ಮನೆಗೆ ಬಂದಾಗ ಒಂದೆರಡು ದಿನ ನಿಮ್ಮಮ್ಮನ ಮನೆಗೆ ಹೋಗಿರಿ ಅಂತ ನನ್ನನ್ನೇ ತವರು ಮನೆಗೆ ಕಳಿಸಿಬಿಡುತ್ತಾಳೆ.
****
ಪೋಲಿಸ್ ಅಧಿಕಾರಿ : ಸರಿ, ನಿನ್ನ ಕಳೆದುಹೋದ ಸೈಕಲಿನ ನಂಬರ್ ಹೇಳು.
ಕಳಕೊಂಡ : ನಂಬರ್ ಸೈಕಲ್ಲಿನೊಡನೆಯೇ ಕಳೆದು ಹೋಗಿದೆ ಸರ್