ಟೀಚರ್ : ನೋಡು ಮಗು ಒಂದು ದಿನ ನಿಮ್ಮ ತಂದೆ ನಿನಗೆ ಬೆಳಗ್ಗೆ 10 ರೂಪಾಯಿ, ಸಂಜೆ 10 ರೂಪಾಯಿ, ರಾತ್ರಿ ಹತ್ತು ರೂಪಾಯಿ, ಕೊಟ್ರೆ ನಿನ್ನ ಹತ್ರ ಒಟ್ಟು ಎಷ್ಟು ರೂಪಾಯಿ ಇರುತ್ತೆ?
ಹುಡುಗ : ಎಷ್ಟು ಇರಲ್ಲ.
ಟೀಚರ್ : ದಡ್ಡ ನಿಂಗೆ ಲೆಕ್ಕ ಒಂದು ಚೂರು ಗೊತ್ತೇ ಇಲ್ಲ.
ಹುಡುಗ : ನಿಮಗೂ ನಮ್ಮ ತಂದೆ ಬಗ್ಗೆ ಒಂಚೂರು ಗೊತ್ತಿಲ್ಲ.
***
ಗುಂಡ : ಲೇ ಹುಷಾರಿಲ್ಲ ಡಾಕ್ಟರನ್ನ ಬರಹೇಳೇ ಅಂದರೆ, ವೆಟರ್ನರಿ ಡಾಕ್ಟರ್ ನ ಯಾಕೆ ಬರ ಹೇಳಿದೆ ?
ಹೆಂಡತಿ : ನೀವು ಮಾತ್ ಎತ್ತಿದರೆ ಒದ್ದುಬಿಡ್ತೀನಿ, ಒದ್ದುಬಿಡ್ತೀನಿ ಅಂತಿದ್ರಲ್ಲ, ಒದಿಯೋದು ಯಾವುದು ಹೇಳಿ ? ಕತ್ತೆ, ಕತ್ತೆನಾ ಟ್ರೀಟ್ ಮಾಡೋರು ಯಾರು ಹೇಳಿ, ವೆಟರ್ನರಿ ಡಾಕ್ಟ್ರರು ತಾನೇ ?
****
ಪೊಲೀಸ್ : ಈ ಕುರಿ ಮತ್ತು ಕುರಿಮರಿ ಯಾರದ್ದು ?
ಬಾಲು : ಕುರಿ ಯಾರದ್ದು ಅಂತ ಗೊತ್ತಿಲ್ಲ. ಆದರೆ ಮರಿ ಯಾರದ್ದು ಅಂತ ಗೊತ್ತು ಸಾರ್ …
ಪೊಲೀಸ್ : ಮರಿ ಯಾರದ್ದು ?
ಬಾಲು : ಮರಿ ಕುರೀದೂ ಸಾರ್…..
***
ಒಬ್ಬಳು ಬಸ್ಸಿನಲ್ಲಿ ಕೂಸೊಂದನ್ನು ಎತ್ತಿಕೊಂಡು ನಿಂತುಕೊಂಡೇ ಪ್ರಯಾಣಿಸುತ್ತಿದ್ದಳು. ಆಗ ಒಬ್ಬ ಎದ್ದು ಅವಳ ಕಡೆ ಬಾಗಿ ಉಸುರಿದ “ನಾನು ಮುಂದಿನ ಊರಿನಲ್ಲಿ ಇಳಿಯುವೆ, ನೀವು ಕೂಡಲೇ ನನ್ನ ಸಿಟ್ಟಿನಲ್ಲಿ ಬಂದು ಕುಳಿತುಕೊಳ್ಳಿ”.