ಲಾಯರ್ : ಸ್ವಲ್ಪ ನ್ಯಾಯ ನೀತಿ, ಧರ್ಮ ಇಟ್ಕೊಂಡು ಬಾಳೋದು, ಬದುಕೋದು ಕಲಿರಿ.
ಕಕ್ಷಿದಾರ : ಲಾಯರ್ ಆಗಿ ಈ ಮಾತು ಹೇಳೋಕೆ ನಿಮಗೆ ನಾಚಿಕೆ ಆಗಲ್ವ
***
ಕೆಂಚ : ಅನಾಥಾಶ್ರಮಕ್ಕೆ ನಿನ್ನ ಕೊಡುಗೆ ಏನು ?
ಕರಿಯ : ನನ್ನ ಆರು ಮಕ್ಕಳು !
***
ಹುಂಜ : ಐ ಲವ್ ಯು
ಹೇಂಟೆ : ನೀನು ನನಗೋಸ್ಕರ ಏನು ಮಾಡಿದ್ದೀಯಾ?
ಹುಂಜ : ಏನು ಬೇಕಾದರೂ ಮಾಡ್ತೀನಿ.
ಹೇಂಟೆ : ಸರಿ ಹಾಗಿದ್ರೆ ಒಂದು ಮೊಟ್ಟೆ ಇಟ್ಟು ತೋರಿಸು ನೋಡೋಣ !
***
ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ ? ಎಂದು ಸೇಲ್ಸ್ಮನ್ ಕೆಲಸಕ್ಕೆ ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದನು.
“ಓಹೋ…. ಸಾಕಷ್ಟು ಇದೆ ಸರ್…. ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ ಮಾರಿದ್ದೇನೆ, ನನ್ನ ಹೆಂಡತಿಯ ಮೈಮಲಿನ ಎಲ್ಲಾ ಆಬರಣಗಳನ್ನು ಸಹ…..”
***
“ಶಾರದಾ, ದೊಡ್ಡ ಗಡಿಯಾರ ಎಲ್ಲಿ ಕಾಣ್ತಾ ಇಲ್ಲ?” ಆಫೀಸಿನಿಂದ ಮನೆಗೆ ಬಂದ ಗಂಡ ಹೇಳಿದ.
“ಅದೇನಾಯ್ತೋ ಗೊತ್ತಿಲ್ಲ. ದಡಾರಂತ ಕೆಳಗೆ ಬಿತ್ತು. ಅರ್ಧ ನಿಮಿಷ ಮುಂಚೆ ಏನಾದರೂ ಬಿದ್ದಿದ್ದರೆ ನಮ್ಮಮ್ಮನ ತಲೆ ಮೇಲೆ ಬಿದ್ದು ಅವರ ತಲೆ ಹೊಡೆದು ಹೋಗುತ್ತಿತ್ತು.”
“ದರಿದ್ರ ಗಡಿಯಾರ” ಗಂಡ ಗೊಣಗಿದ “ಯಾವಾಗಲೂ ಸ್ಲೋನೆ….”














