ವೈದ್ಯ : ರಾಜ ಈ ಬಾರಿ ನಿಮಗೇನು ತೊಂದರೆ ಆಗದಂತೆ ಆಪರೇಷನ್ ಮಾಡ್ತೀನಿ, ಅದ್ಸರಿ ಇದೇನು “ಜಿಪ್” ತಂದಿದ್ದೀರಲ್ಲಾ ?
ರಾಜು : ನೀವು ಪ್ರತಿಸಲ ಆಪರೇಷನ್ ಮಾಡಿದಾಗ್ಲೂ ನನ್ನ ಹೊಟ್ಟೆಯಲ್ಲಿ ಏನಾದ್ರೂ ಬಿಟ್ಟು ಮತ್ತೆ ಅದು ತೆಗೆಯೋಕೆ ಆಪರೇಷನ್ ಮಾಡ್ತಾ ಇರ್ತೀರಿ. ಅದಕ್ಕೆ ಈ ಬಾರಿ ಆಪರೇಷನ್ ಮಾಡಿದಾಗ ಈ ಜಿಪ್ ಹಾಕ್ಬಿಡಿ, ನಿಮಗೂ ಅನುಕೂಲ ನನಗೂ ಅನುಕೂಲ.
***
ರಾಜು : ಇವತ್ತು ನಾನು ಮೂರು ಗಂಡು ಸೊಳ್ಳೆ, ಮೂರು ಹೆಣ್ಣು ಸೊಳ್ಳೆ, ಹೊಡೆದುಹಾಕ್ದೆ.
ಕಿಟ್ಟು : ಸೊಳ್ಳೆಗಳಲ್ಲಿ ಗಂಡು ಹೆಣ್ಣು ಅಂತ ಅದು ಹೇಗೆ ಗೊತ್ತು ಮಾಡ್ದೆ?
ರಾಜು : ಅದು ಗೊತ್ತುಮಾಡೋದೆನು ಎಂದಿಲ್ಲ.
ಕಿಟ್ಟು : ಅದೆಂಗೆ ಗೊತ್ತು ಮಾಡಿದೆ ?
ರಾಜು : ಮೂರು ಸೊಳ್ಳೆ ನನ್ನ ಹೆಂಡ್ತಿ ಸೀರೆ ಮೇಲೆ ಕುಳಿತಿದ್ದವು, ಅವು ಹೆಣ್ಣು ಸೊಳ್ಳೆ, ಮೂರು ನನ್ನ ಪ್ಯಾಂಟ್ ಮೇಲೆ ಕೊಡುತ್ತಿದ್ದವು ಅವು ಗಂಡು ಸೊಳ್ಳೆ.
****
ಶಿಕ್ಷಕ : ರಾಜು ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ?
ರಾಜು : ಐ.ಸೆ.ಎಸ್.ಇನ್ ವಿಂಟರ್,ಐ.ಸೆ.ಇಸ್ಿಸ್.ಸಮ್ಮರ್.
ಶಿಕ್ಷಕ : ಹಾಗಂದ್ರೇನು ಸರಿಯಾಗಿ ಬಿಡಿಸಿ ಹೇಳು.
ರಾಜು : ಹಾಗಂದ್ರೆ, ಪಕೋಡ ಚಾರ್ಟ್ಸ್ ಸೆಲ್ಲರ್ ಇನ್ ವಿಂಟರ್, ಐಸ್ ಕ್ರೀಮ್ ಸೆಲ್ಲರಿಂಗ್ ಇನ್ ಸಮ್ಮರ್.
ಕಿಟ್ಟು : ಇದೇನೋ ರಾಜು ಅಂಗಿ ಮೇಲೆಲ್ಲಾ ಸಾಫ್ಟ್, ಸಾಫ್ಟ್ ಅಂತ ಬರ್ಕೊಂಡಿದ್ದೀಯಾ ?
ರಾಜು : ಹುಡ್ಗೀರ್ಗೆ ಸಾಫ್ಟ್ ವೇರ್ ಹುಡುಗರು ಇಷ್ಟವಾಗ್ತಾರಂತೆ ಅದಕ್ಕೆ.
ರಾಜು : ಬಾಳೆಹಣ್ಣಿಗೆ ಎಷ್ಟು ?
ಅಂಗಡಿಯವ : ಒಂದು ರೂಪಾಯಿ.
ರಾಜು :60 ಪೈಸೆಗೆ ಕೊಡ್ತೀಯ ?
ಅಂಗಡಿಯವ : 60 ಪೈಸೆಗೆ ಸಿಪ್ಪೆ ಮಾತ್ರ ಬರುತ್ತೆ.
ರಾಜು : ಹಾಗಾದ್ರೆ ತಗೋ 40 ಪೈಸೆ ಬಾಳೆಹಣ್ಣು ಕೊಡು, ಸಿಪ್ಪೆ ನೀನೇ ಇಟ್ಕೋ.
****
ಪದ್ಮ : ನಿಮ್ ಮಗ ಮೆಡಿಕಲ್ ಕಾಲೇಜಿನಲ್ಲಿ ಚೆನ್ನಾಗಿ ಓದುತ್ತಾ ಇದ್ದಾನ ?
ಗೀತಾ : ಚೆನ್ನಾಗೆ ಓದುತ್ತಾ ಇದ್ದಾನೆ ಅಂತ ಕಾಣುತ್ತೆ.
ಪದ್ಮ : ಅದು ಹೇಗೆ ಹೇಳ್ತೀರಿ ?
ಗೀತಾ : ಈಚೆಗಂತೂ ಅವನು ಬರೆದ ಕಾಗದ ಓದಕ್ಕೆ ಆಗ್ತಿಲ್ಲ.