ತಲೆಯನ್ನು
ತಿಮ್ಮ ಊರಿಡಿ ಸಾಲ ಮಾಡಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಒಮ್ಮೆ ಮನೆಯಲ್ಲಿ ಇದ್ದಾಗ ಸಾಲಕೊಟ್ಟವನೊಬ್ಬ ಹುಡುಕಿಕೊಂಡು ಬಂದಿದ್ದ. ಆಗ ತಿಮ್ಮನ ಹೆಂಡತಿ ಹೊರಗೆ ಬಂದು “ಅವರು ಮನೆಯಲಿಲ್ಲ” ಎಂದಳು.
ಆಗ ಸಲ ಕೊಟ್ಟವನು ಹೇಳಿದ “ಅವರು ಇನ್ನೊಮ್ಮೆ ಹೊರಗೆ ಹೋಗುವಾಗ ಮರೆಯದೇ ಅವರ ತಲೆಯನ್ನು ತೆಗೆದುಕೊಂಡು ಹೋಗಲು ಹೇಳಿ…”
*****
ಅಗತ್ಯಗಳು
ನನಗೆ ಬೇಕು
ದಿನವಿಡೀ ಕಾವ್ಯ
ನನ್ನವರಿಗೆ ಬೇಕು
ಸಂಗೀತ ಶ್ರಾವ್ಯ
ತಿಂಡಿ ತಿನಿಸು
ಚುರುಮುರಿ ದ್ರವ್ಯ!
*****
ನಗೆ ಡಂಗುರ – ೨೦೦
ಶೇಖರ: ತನ್ನ ಗೆಳೆಯನೊಂದಿಗೆ: ‘ನನ್ನ ಪ್ರೇಯಸಿ ಯಾವಾಗಲೂ ಹೀಟರ್‍ನಲ್ಲಿ ಬಿಸಿಯಾಗಿರುತ್ತಾಳಯ್ಯಾ’
ಶಂಕರ: ‘ಹಾಗಾದರೆ ಅವಳ ಬಿಲ್ಲೂ ಸಹ ಕರೆಂಟ್‍ಬಿಲ್‌ನಂತೆ ಬರುತ್ತಿರಬಹುದು ಅಲ್ಲವೆ?’