ರಾಜು : ಗೀತಾ ನಾನು ನಿನ್ನ ಪ್ರೀತಿಸುತ್ತೇನೆ
ಗೀತಾ : ಪ್ರೀತಿಸುವಂತೆ ಮೊದಲು ನಿನ್ನ ಸಂಬಳ ಎಷ್ಟು ಅನ್ನೋದನ್ನ ಹೇಳು ?
ರಾಜು : ನನಗೆ ಸಂಬಳ ತಿಂಗಳಿಗೆ 5000 ಬರುತ್ತದೆ.
ಗೀತಾ : ನಿನ್ನ ತಿಂಗಳ ಸಂಬಳ ನನಗೆ ಒಂದು ತಿಂಗಳ ಸೋಪು ಶಾಂಪೂಗೆ ಸಾಕಾಗಲ್ಲ.
ರಾಜು : ಅಂದ್ರೆ ನೀ ಅಷ್ಟು ಗಲೀಜಾ?
***
ಗೀತಾ : ಅಲ್ರಿ ರಾತ್ರಿ ಹೊತ್ತು ಯಾಕೆ ಊಟ ಬಿಟ್ರಿ ?
ರಾಜು : ಹಣ ಉಳಿಸೋಕೆ. ಉಳಿಸೋದು ಕಲಿತರೆ ಗಳಿಸಬಹುದು. ಇವತ್ತು ನೀನು ಊಟ ಬಿಡು. ನಿನಗೆ 5 ರೂ.ಕೊಡ್ತೀನಿ.
ಗೀತಾ : ಆಯ್ತು ರಾತ್ರಿ ಹೊತ್ತು ಊಟ ಬಿಟ್ಟೆ 5ರೂ. ಕೊಡಿ.
ರಾಜು : ಈಗ ತಿಂಡಿ ತಿನ್ನೋರು 5 ರೂ. ಕೊಡಬೇಕು ಗೊತ್ತಾ?
***
ರಾಜು : (ಹೋಟೆಲ್ ನಲ್ಲಿ) ಮಾಣಿ ಒಂದು ಗ್ಲಾಸ್ ನೀರು ಕೊಡಯ್ಯ.
ಮಾಣಿ : ಕುಡಿಯಲಿಕ್ಕಾ ಸಾರ್..?
ರಾಜು : ಇಲ್ಲ ಸ್ನಾನ ಮಾಡೋಕೆ.
***
ಕಿಟ್ಟು : ಲೋ ರಾಜು, ಹಣಕ್ಕಾಗಿ ನನಗೇಕೋ ಫೋನ್ ಮಾಡಿದೆ ?
ರಾಜು : ಅದಕ್ಕೆ ಕಾರಣ ಇದೆ ಕೇಳು, ನೀರು ಕೊಡು ಅಂತ ದೇವರನ್ನ ಬೇಡಿಕೊಂಡೆ ನದಿನೇ ಕೊಟ್ಟ, ಹೂ ಕೇಳಿದೆ ಒಂದು ಬೃಂದಾವನನ್ನು ಕೊಟ್ಟ, ಮನೆ ಕೇಳಿದೆ ಒಂದು ಅರಮನೆಯನ್ನು ಕೊಟ್ಟ, ಹಣ ಕೇಳಿದೆ ಅದಕ್ಕೆ ನಿನ್ನ ನಂಬರ್ ಕೊಟ್ಟ.