ಗುಂಡ : ಸಾರ್ ತಮ್ಮಿಂದ ಒಂದು ಸಹಾಯವಾಗಬೇಕಿತ್ತು.
ರಾಜು : ನೋಡಯ್ಯ ನಾನು ಒಬ್ಬ ಸ್ಟ್ರಿಟ್ ಆಫೀಸರ್. ಆಫೀಸ್ ವಿಚಾರ ಬಿಟ್ಟು ಬೇರೆ ಏನಾದರೂ ಕೇಳು ?
ಗುಂಡ : ನನಗೆ ಒಂದೈದು ದಿನ ರಜಾ ಬೇಕಾಗಿತ್ತು ಸರ್.
ರಾಜು : ಏನಂದೆ ಐದು ದಿನ ರಜಾ ಏತಕ್ಕಾಗಿ ?
ಗುಂಡ : ನನ್ನ ಮದುವೆ ಇದೆ ಸರ್
ರಾಜು : ಐದು ದಿನ ಅಲ್ಲ ಒಂದು ದಿನ ರಜಾ ಕೊಡೋಕೆ ಆಗೊಲ್ಲ. ಅದಕ್ಕೆ ಬದಲಿ ವ್ಯವಸ್ಥೆ ಮಾಡ್ಕೋ.
***
ರಾಜು : ಸ್ವಾಮಿ ಸಚಿವರೇ, ನಮ್ಮೂರ್ಗೊಂದು ಸೇತುವೆ ಸ್ಯಾಂಕ್ಷನ್ ಮಾಡಿ.
ಸಚಿವರು : ಅಲ್ಲಪ್ಪ ನಿಮ್ಮೂರಿನಲ್ಲಿ ಹೊಳೆನೇ ಇಲ್ಲ
ರಾಜು : ಹೌದಲ್ಲ, ಹಾಗಾದ್ರೆ ಮೊದಲು ಒಂದು ಹೊಳೆ ಸ್ಯಾಂಕ್ಷನ್ ಮಾಡಿ. ಆನಂತರವೇ ಸೇತುವೆ ಸ್ಯಾಂಕ್ಷನ್ ಮಾಡಿ.
***
ಇಂಜಿನಿಯರ್ ಗುಂಡ : ಮನುಷ್ಯನನ್ನು ಸೃಷ್ಟಿ ಮಾಡಿದ್ದು ಮೆಕಾನಿಕಲ್ ಇಂಜಿನಿಯರ್ ನೋಡಿ ಕೈ, ಕಾಲು, ಬೆರಳು, ಮಂಡಿ, ಮೊಣಕೈ, ಬೆನ್ನುಹುರಿ, ಎಲ್ಲಾ ಕಡೆ ಜಾಯಿಂಟ್ಸ್ ಇವೆ.
ಕಮ್ಯುನಿಕೇಶನ್ ಇಂಜಿನಿಯರಿಂಗ್ ಕಿಟ್ಟು : ನೀನು ಹೇಳೋದು ಸುಳ್ಳು, ನೋಡು ಬಾಡಿ ಪೂರ್ತಿ ನೆರಮಂಡಲ ಇದೆ. ಎಲ್ಲಿಗೆ ಚುಚ್ಚಿದರೂ ನೋವು ಗೊತ್ತಾಗುತ್ತೆ ಆದ್ದರಿಂದ ಹೇಳಬಹುದು ಮನುಷ್ಯನನ್ನು ಸೃಷ್ಟಿ ಮಾಡಿದವನು ಕಮ್ಯುನಿಕೇಷನ್ ಇಂಜಿನಿಯರೇ
ಸಿವಿಲ್ ಇಂಜಿನಿಯರ್ ರಾಜು : ಇಬ್ಬರು ಸುಮ್ಮನಿರಿ, ಮನುಷ್ಯನ ಸೃಷ್ಟಿ ಸಿವಿಲ್ ಇಂಜಿನಿಯರ್ ಹೊಟ್ಟೆಯಲ್ಲಿ ಆರಡಿ ಉದ್ದದ ಕರುಳಿನ ಕಾಲುವೆ ಇದೆ. ಅದರ ಕೊನೆಯಲ್ಲಿ ಒಳ್ಳೆ ಲೇಔಟ್ ಸಹ ಇದೆ.
***
ಮೇಜರ್ : ರಾಜು ಶತ್ರುಗಳು ನಾಲ್ಕು ಕಡೆಗಳಿಂದಲೂ ಮುತ್ತಿದರೆ ಏನು ಮಾಡುತ್ತೀಯಾ ?
ರಾಜು : ಅದು ಒಳ್ಳೆ ಸಮಯ ಸರ್, ಯಾವ ಕಡೆಗೆ ಬೇಕಾದರೂ ಗುಂಡು ಹಾರಿಸಬಹುದು.