ಕಿಟ್ಟು : ಲೋ ರಾಜು, ಈಗ ನಾವು ಹೋಗ್ತಾ ಇರೋದು ಯುದ್ಧ ಭೂಮಿಗೆ.
ರಾಜು : ಅದು ನಂಗೊತ್ತು ಕಣೋ
ಕಿಟ್ಟು : ಮತ್ತೇಕೆ ಈ ಸೊಳ್ಳೆ ಪರದೆ ಒಳಗೆ ಸೊಳ್ಳೆನೆ ಹೋಗೋಕಾಗಲ್ಲ, ಅಂದ್ಮೇಲೆ ಗುಂಡು ಹೇಗೋ ಇದರೊಳಕ್ಕೆ ಹೋಗುತ್ತೆ?
***
ಅಂಗಡಿಯವ : ಸರ್ ಇದು ಇರುವೆ ಪೌಡರ್ ತೆಗೆದು ಕೊಂಡು ಹೋಗಿ.
ರಾಜು : ಅದು ಬೇಡವೇ ಬೇಡ.
ಅಂಗಡಿಯವ :ಏಕೆ ಸಾರ್ ?
ರಾಜು : ಇವತ್ತು ಪೌಟರ್ ತೆಗೆದುಕೊಂಡು ಹೋಗಿ ಕೊಟ್ಟರೆ ನಾಳೆ ಸೆಂಟ್ ಕೇಳೋಲ್ಲಾ ಅನ್ನೋದೇನು ಗ್ಯಾರಂಟಿ?
***
ರಾಜು : ರೀ… ಬೇರೆ ಪುಸ್ತಕ ಕೊಡಿ
ಲೈಬ್ರಡಿಯನ್ : ಏಕೆ ಈ ಪುಸ್ತಕ ಏನಾಗಿದೆ?
ರಾಜು : ನೋಡಿ ಇಲ್ಲಿ ಬರೀ ಪಾತ್ರಧಾರಿಗಳ ಹೆಸರೇ ಇದೆ. ಕಥೆನೇ ಇಲ್ಲ.
ಲೈಬ್ರರಿಯನ್ : ನೋಡಿ ಇನ್ನೊಂದು ಬಾರಿ ರಿಜಿಸ್ಟರ್ ಬುಕ್ ತಗೊಂಡು ಹೋದ್ರೆ, ಕಾಲು ಮುರಿತೀನಿ.