ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಏನಯ್ಯ ಇದೂ, ನೀರಿನಲ್ಲಿ ಲೋಟದಲ್ಲಿ ಜಿರಳೆ ತೇಲ್ತಾ ಇದೆ.

ಮಾಣಿ : ಸುಮ್ನೆ ಕುಡೀರಿ ಸರ್, ಒಳಗಡೆ ನೀರಿನ ಡ್ರಮ್ ನಲ್ಲಿ ಬೆಕ್ಕುಗಳೇ ತೆಲ್ತಾ ಇವೆ.

***

ರಾಜು : ಡಾಕ್ಟರ್, ನೀವೀಗ ನನಗೆ ಮಾಡುವ ಆಪರೇಷನ್ ಶಾಕ್ ಉಂಟು ಮಾಡುತ್ತಾ ?

ಡಾಕ್ಟರ್ : ಆಪರೇಷನ್ ಇಂದ ಏನು ಆಗೊಲ್ಲ. ನನ್ನ ಬಿಲ್ ನೋಡಿ ಷಾಕ್ ಆಗಬಹುದು.

***

ರಾಜು : ನೋಡು ಅಲ್ಲಿ ಹೋಗ್ತಾ ಇರೋ ಹುಡುಗಿಗೆ ಕಿವಿ ಕೇಳಿಸಲ್ಲ ಅಂತ ಕಾಣುತ್ತೆ.

ಕಿಟ್ಟು : ಅದು ನಿಂಗೆ ಹೇಗೆ ಗೊತ್ತಾಯ್ತು ?

ರಾಜು : ನಾನು ಐ ಲವ್ ಯು ಅಂದೆ, ಅದಕ್ಕೆ ಅವಳು ಕಾಲಲ್ಲಿರೋದು ಹಳೆ ಚಪ್ಪಲಿ ಅಂದ್ಲು.

***

ಗೀತಾ : ರೀ ಅಂಗಡಿಯಿಂದ ಎಲ್ಲಾ ಸಮಾನು ತಂದ್ರಿ, ಉಪ್ಪೆ ತಂದಿಲ್ಲ. ಈಗ ಚಟ್ನಿಗೆ ಹಾಕೋಕೆ ಉಪ್ಪು ಇಲ್ಲ.

ರಾಜು : ಅದ್ಯಾಕೆ ಯೋಚನೆ ಮಾಡ್ತೀಯಾ, ಕೋಲ್ಗೆಟ್ ಟೂತ್ಪೇಸ್ಟ್ ಹಾಕೂ ಹೇಗೋ ಅದರಲ್ಲಿ ಉಪ್ಪಿದೆಯಲ್ಲ.

***

ಟೀಚರ್ : ರಾಜು, ನಿಂಗೆ ಇಂಗ್ಲಿಷ್ ಮಾತನಾಡೋಕೆ ಬರುತ್ತಾ ?

ರಾಜು : ಬರುತ್ತೆ ಮೇಡಂ.

ಟೀಚರ್ : ಎಲ್ಲಿ ಮಾತಾಡು ?

ರಾಜು : ಇಂಗ್ಲಿಷ್.