ತಂದೆ : ಲೋ ರಾಜು ಮೊಬೈಲ್ ಹಿಡ್ಕೊಂಡು ಏನು ಮಾಡ್ತಾ ಇದ್ದೀಯಾ ?
ರಾಜು : ನನ್ನ ಸ್ನೇಹಿತನಿಗೆ ಮೆಸೇಜು ಕಳಿಸ್ತಾ ಇದ್ದೀನಿ ಕಣಪ್ಪ.
ತಂದೆ : ನಿನಗೆ ನೆಟ್ಟಗೆ ಬರೆಯೋಕೆ ಬರಲ್ಲ
ರಾಜು : ಏನ್ ತೊಂದ್ರೆ ಇಲ್ಲ ನನ್ನ ಸ್ನೇಹಿತನಿಗೆ ಓದೋಕೆ ಬರಲ್ಲ.
***
ರಾಜು : ಗೀತ ಈಗ ನನಗೆ 18 ವರ್ಷ ನಿನಗೆ ?
ಗೀತಾ : ನನಗೂ 18
ರಾಜು : ಬಾ ಮತ್ತೆ ಹೋಗೋಣ
ಗೀತಾ : ಎಲ್ಲಿಗೆ ?
ರಾಜು : ಓಟು ಹಾಕೋಕೆ.
***
ವಕೀಲ : ಆರೋಪಿ ನಿನ್ನನ್ನು ಏನೆಂದು ಬೈದ ?
ಫಿರ್ಯಾದಿ : ಅದು ತೀರಾ ಕೆಳಮಟ್ಟದ್ದು, ಅಶ್ಲೀಲ. ಮರ್ಯಾದಸ್ಥರ ಮುಂದೆ ಹೇಳುವಂಥದ್ದಲ್ಲ.
ವಕೀಲ : ಹಾಗಾದರೆ ನೀನು ಅದನ್ನು ನ್ಯಾಯಾಧೀಶರ ಕಿವಿಯಲ್ಲಿ ಹೇಳು.
***
ಮಹಿಳೆ : ಈ ಬಸ್ಸಿನಲ್ಲಿ ಮಕ್ಕಳಿಗೆ ಅರ್ಧ ಟಿಕೆಟ್ ಚಾರ್ಜ್ ತಾನೆ ?
ಕಂಡಕ್ಟರ್ : ಹೌದು, 12ಕ್ಕಿಂತ ಕಡಿಮೆ ಇದ್ದರೆ ಮಾತ್ರ.
ಮಹಿಳೆ : ಸದ್ಯ ಒಳಿತಾಯ್ತು. ನನಗೆ ಹತ್ತೆ ಮಕ್ಕಳು.