ಮೇಡಂ : ಹುಡುಗರು ಹಾಗೆಲ್ಲ ಕೇಳಬಾರದು, ನಾಳೆ ನಿಮ್ಮಪ್ಪನ ಕರೆದುಕೊಂಡು ಬಾ.
ರಾಜು : ಅವರಿಗಾಗ್ಲೆ ಮದುವೆಯಾಗಿದೆ ಮೇಡಂ.
***
ರಾಜು : ಲೇ ಹುಡುಗಿ, ತೊಡೆಯೆಲ್ಲಾ ಕಾಣುವಂತ ಲಂಗ ತೊಟ್ಕೊಂಡು ಬೀದಿಲಿ ಬರ್ತೀರಲ್ಲ, ಏಕೆ ?
ಹುಡುಗಿ : ನಿಮ್ಮಂಥೋರು ನಮ್ಮನ್ನ ಹಿಡ್ಕೊಳ್ಳೋಕೆ ಬಂದ್ರೆ ತಪ್ಪಿಸಿಕೊಂಡು ಓಡಿ ಹೋಗಕ್ಕೆ ಅನುಕೂಲವಾಗಲಿ ಅಂತ.
ರಾಜು : ನಾವು ಯಾಕೆ ನಿಮ್ಮಂಥವರನ್ನು ಹಿಡ್ಕೊಳಕ್ಕೆ ಬರ್ತೀವಿ ಗೊತ್ತಾ ?
ಹುಡುಗಿ : ನೀವು ಹೀಗೆ ಮೈ ಕಣೋ ಬಟ್ಟೆ ಹಾಕ್ಕೊಂಡು ಬೀದಿಗೆ ಬಂದಿದ್ದರಿಂದದ್ಲೇ.
****
ರಾಜು : ನನ್ನ ಮಗಳು ಎಷ್ಟು ಬೆಳದಿದ್ದಾಳೆ ಅನ್ನೋದು ನಮ್ಮನೇಗೆ ಫೋನ್ ಹಾಕ್ಸಿದ ಮೇಲೆ ಗೊತ್ತಾಯ್ತು.
ಕಿಟ್ಟು : ಫೋನಿಗೂ ನಿನ್ ಮಗಳು ಬೆಳೆದಿರುವುದಕ್ಕೆ ಏನಯ್ಯಾ ಸಂಬಂಧ ?
ರಾಜು : ದಿನಕ್ಕೆ ಏನಿಲ್ಲವೆಂದರೂ 8-10 ಹುಡುಗರು ಅವಳಿಗೆ ಫೋನ್ ಮಾಡ್ತಾ ಇದ್ದಾರೆ.
***
ರಾಜು : ಹಲೋ ಯಾರು ? ಕಿಟ್ಟುನಾ, ಏನ್ ಸಮಾಚಾರ ? ಒಂದು ವಿಚಾರ ಹೇಳೋದು ಮರೆತಿದ್ದೆ, ಎಲ್ಲೇ ಇರು ಇವತ್ತು ಮನೆಯಿಂದ ಹೊರಗಡೆ ಬರಬೇಡ.
ಕಿಟ್ಟು : ಯಾಕೋ ?
ರಾಜು : ಕೋತಿ ಹಿಡಿಯುವವರು ಬಂದಿದ್ದಾರೆ ಅದಕ್ಕೆ.