ಶಿಕ್ಷಕ : ಬೇರಿಯಂನ ರಾಸಾಯನಿಕ ಸೂತ್ರವೇನು ?
ಕಿಟ್ಟು : ಬಿ.ಎ ಸರ್
ಶಿಕ್ಷಕ : ಹಾಗಾದರೆ ಸೋಡಿಯಂನ ಸೂತ್ರ ಏನು?
ಸೀನ : ಎನ್.ಎ ಸರ್
ಶಿಕ್ಷಕ : ಹಾಗಾದ್ರೆ ಒಂದು ಬೇರಿಯಂ ಎರಡು ಸೋಡಿಯಂ ಅಣುಗಳ ರಾಸಾಯನಿಕ ಸೂತ್ರ ಏನು ?
ರಾಜು : ಬನಾನಾ ಸರ್
ಶಿಕ್ಷಕ : ಅದು ಹೇಗೋ
ರಾಜು : ಬೇರಿಯಂ ಬಿ.ಎ ಸೋಡಿಯಂ ಎರಡು ಎನ್.ಎ ಬಿ.ಎ.ಎನ್.ಎ.ಎನ್.ಎ.
***
ಕಿಟ್ಟು : ಲೋ ರಾಜು, ಆ ಗೀತಾಗೆ ಏನಂತ ಮೆಸೇಜ್ ಕಳಿಸಿದ್ದೆ ?
ರಾಜು : ನೀನೆ ನನ್ನ ಅಪ್ಸರೆ, ನೀನೆ ನನ್ನ ಉಸಿರು, ನೀನೆ ನನ್ನ ಬದುಕು, ನೀನೆ ನನ್ನ ಸರ್ವಸ್ವ, ನೀನೆ ನನ್ನ ಹೃದಯ, ಎಂದು ಕಳುಹಿಸಿದೆ.
ಕಿಟ್ಟು : ಅದಕ್ಕೇನು ಅವಳೇನು ಉತ್ತರಿಸಲಿಲ್ವೇ ?
ರಾಜು : ಉತ್ತರಿಸಿದಳು.
ಕಿಟ್ಟು : ಏನಂತಾ ?
ರಾಜು : ಅಣ್ಣ ನಿಮಗೆ ಎಸ್ಎಂಎಸ್ ಫ್ರೀನಾ ಅಂತ.