ರಾಜು : (ಮಗುವಾಗಿದ್ದಾಗ) ಅಮ್ಮ, ಟಾಯ್ಲೆಟ್ಗೆ ಅಂತ ಬಾತ್ ರೂಮ್ ಗೆ ಬಾಗಿಲು ತೆಗೆದೊಡನೆ ಲೈಟ್ ತಾನಾಗೆ ಹತ್ತಿಕೊಂಡಿತು. ಏಕೆ ?
ತಾಯಿ : ಅಯ್ಯೋ ರಾಮ, ನೀನು ಹಾಗಾದ್ರೆ ಫ್ರಿಜ್ ನಲ್ಲಿ ಕಕ್ಕಾ ಮಾಡಿದೆಯಾ ?
***
ಅಪ್ಪ : ಯಾಕೋ ರಾಜು ನಿಮ್ಮಮ್ಮ ಏನು ಮಾತಾಡ್ತಾ ಇಲ್ಲ ?
ರಾಜು : ಅದಕ್ಕೆ ನಾನೇ ಕಾರಣ ಕಣಪ್ಪಾ.
ಅಪ್ಪ : ಅಂತದೇನು ಮಾಡಿದೆ ?
ರಾಜು : ಅಮ್ಮ ಲಿಪ್ಸ್ಟಿಕ್ ಕೇಳಿದ್ಲು, ನಾನು ಮರೆತು ಫೆವಿಕ್ವಿಕ್ ಕೊಟ್ಟೆ ಅಷ್ಟೇ.
****
ಡಾಕ್ಟರ್ : ಏನಪ್ಪ ರಾಜು ತುಂಬಾ ಏಟಾಗಿದೆ. ಮೈತುಂಬಾ ಹೊಲಿಗೆ ಹಾಕ್ಬೇಕು, ?
ರಾಜು : ಡಾಕ್ಟ್ರೆ ಹೊಲಿಗೆ ಹಾಕಲು ಖರ್ಚು ಎಷ್ಟು ಬೀಳುತ್ತೆ ?
ಡಾಕ್ಟರ್ : ಒಂದು 10,000 ಬೀಳಬಹುದು
ರಾಜು : ಒಂದು ಕೆಲಸ ಮಾಡಿ ಡಾಕ್ಟರೆ. ಬರೀ ಹೊಲಿಗೆ ಹಾಕಿ. ಅದಕ್ಕೆ ಎಂಬ್ರಾಯಿಡರಿ ಏನು ಬೇಡ. ಆಗ ಖರ್ಚು ಸ್ವಲ್ಪ ಕಮ್ಮಿ ಆಗ್ಬೋದು.