ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಉಪಾಧ್ಯಾಯ : ರಾಜು ಅಮೆರಿಕಾದ ರಾಷ್ಟ್ರಪತಿ ಎಲ್ಲಿ ವಾಸ ಮಾಡುತ್ತಾರೆ?

ರಾಜು : ದೋಬಿ ಘಾಟಿನಲ್ಲಿ ಸರ್

ಉಪಾಧ್ಯಾಯ : ಇದೇನು ಹೀಗೆ ಹೇಳ್ತೀಯಾ ?

ರಾಜು : ವಾಷಿಂಗ್ಟನ್ ಅಂದ್ರೆ ಕನ್ನಡದಲ್ಲಿ ದೋಬಿ ಘಾಟ್ ತಾನೆ.

***

ಗೀತಾ : ದಿನ ನಮ್ಮನೇಗೆ ಭಿಕ್ಷಕ್ಕೆ ಬರ್ತಿಯಲ್ಲ. ಈ ಊರಲ್ಲಿ ಬೇರೆ ಮನೆಗಳಿಲ್ವೇ ?

ರಾಜು : ಬೇರೆ ಮನೆ ಇದೆ ತಾಯಿ. ಆದ್ರೆ ಒಂದು ಕಡೆ ಊಟ ಮಾಡು ಅಂತ ನನಗೆ ಡಾಕ್ಟರ್ ಹೇಳಿದ್ದಾರೆ.

***

ಕಿಟ್ಟು : ಲೋ ರಾಜು, ಲವ್ ಮ್ಯಾರೇಜಿಗೂ, ಅರೇಂಜ್ಡ್ ಮ್ಯಾರೇಜಿಗೂ, ಏನಿದೆ ವ್ಯತ್ಯಾಸ ?

ರಾಜು : ನಾವೇ ಹೋಗಿ ಬಾವಿಗೆ ಬಿದ್ದರೆ ಅದು ಲವ್ ಮ್ಯಾರೇಜ್.  ನೂರಾರು ಜನ ಸೇರಿ ಬಾವಿಗೆ ತಳ್ಳಿದರೆ ಅದು ಅರೆಂಜ್ಡ್ ಮ್ಯಾರೇಜ್ ವ್ಯತ್ಯಾಸ ಈಗ ಗೊತ್ತಾಯ್ತಾ ?