ಶಿಕ್ಷಕ : ನಿಮ್ಮ ತಂದೆ ಹೆಸರೇನು ?
ರಾಜು : ತಂದೆ ಹೆಸರ ಕನ್ನಡದಲ್ಲಿ ಹೇಳಲೋ ? ಇಂಗ್ಲೀಷ್ ನಲ್ಲಿ ಹೇಳಲೋ ?
ಶಿಕ್ಷಕ : ನೋಡೋಣ ಇಂಗ್ಲಿಷ್ ನಲ್ಲಿ ಹೇಳು ?
ರಾಜು : ವೆಲ್ ಬುಲ್ ಫಾದರ್
ಶಿಕ್ಷಕ : ಹಾಗಂದ್ರೆ ಏನೋ?
ರಾಜು : ಚೆನ್ನಬಸಪ್ಪ.
**
ಗೀತಾ : ರೀ, ನನ್ನ ಯಾವುದಕ್ಕೆ ಹೋಲಿಸುತ್ತೀರಿ ?
ರಾಜು : ನಿನ್ನ ನಗುವನ್ನು ಹೂವಿಗೆ ಹೋಲಿಸುತ್ತೇನೆ, ನಿನ್ನ ಕಂಠಸಿರಿಯನ್ನು ಕೋಗಿಲೆಗೆ ಹೋಲಿಸುತ್ತೇನೆ, ನಿನ್ನ ಮುಗ್ಧತೆಯನ್ನು ಮಗುವಿಗೆ ಹೋಲಿಸುತ್ತೇನೆ.
ಗೀತ : ಇಷ್ಟೇಯ ?
ರಾಜು : ಇನ್ನೂ, ಇದೇ. ನಿನ್ನ ಮೂರ್ಖತನಕ್ಕೆ ಬೇರೆ ಯಾರು ಇಲ್ಲ ನಿನಗೆ ನೀನೇ ಸಾಟಿ.
***
ಕಿಟ್ಟು : ಇದೇನೋ ರಾಜು, ಮೈತುಂಬಾ ಗಾಯ, ಏನ್ ಮಾಡಿಕೊಂಡಿಯೋ ?
ರಾಜು : ಬೀದಿ ರೌಡಿ ಒಬ್ಬ ಸಿಕ್ಕಾಪಟ್ಟೆ ಹೊಡೆದು ಬಿಟ್ಟ ಕಣೋ.
ಕಿಟ್ಟು : ಅರೆ, ನೀನು ಕರಾಟೆಲಿ ಬ್ಲಾಕ್ ಬೆಲ್ಟ್ ಅಲ್ವೇ ?
ರಾಜು : ನಾನು ಕರಾಟೆ ನಿಯಮದ ಪ್ರಕಾರನೇ ಫೈಟ್ ಮಾಡ್ದೆ. ಆದರೆ, ಅವನು ಯಾವುದೇ ನಿಯಮವಿಲ್ಲದ ಸಿಕ್ಕಾಪಟ್ಟೆ ಹೊಡೆದುಬಿಟ್ಟ.