ಕ್ಯಾಪ್ಟನ್ : ಹಡಗು ಮುಳುಗ್ತಾ ಇದೆ.
ರಾಜು : ನೆಲ ಇಲ್ಲಿಂದ ಎಷ್ಟು ದೂರ
ಕ್ಯಾಪ್ಟನ್ : ಒಂದು ಕಿಲೋಮೀಟರ್
ರಾಜು : (ನೀರಿಗೆ ಹಾರಿ) ನೆಲ ಯಾವ ದಿಕ್ಕಿನಲ್ಲಿದೆ?
ಕ್ಯಾಪ್ಟನ್ : ಸೀದ ಕೆಳಗೆ ಹೋಗಿ, .ಬೇಗ ನೆಲ ಸಿಗುತ್ತೆ.
***
ಕಿಟ್ಟು : ಅಲ್ವೋ ರಾಜು, ಬಸ್ ದರ ಇಷ್ಟೊಂದು ಜಾಸ್ತಿಯಾಗಿದೆ. ಬೆಂಗಳೂರಿಗೆ ನಾಲ್ಕು ಬಾರಿ ಸುಮ ಸುಮ್ನೆ ಹೋಗಿ ಬಂದೆ ?
ರಾಜು : ನಿಂಗೊತ್ತಿಲ್ಲ ಮುಂದಿನ ವರ್ಷ ಬಸ್ ದರ ಇನ್ನೂ ಜಾಸ್ತಿಯಾಗುತ್ತೆ. ಅದಕ್ಕೆ ಈಗಲೇ ಹೋಗಿ ಬರ್ತಾ ಇದೀನಿ.
***
ರಾಜು : ಲೋ, ಕಿಟ್ಟು ನೆನ್ನೆ ರಾತ್ರಿ ಫಂಕ್ಷನ್ ಗೆ ಹೋಗಿದ್ವಿ ನೋಡು, ಅಲ್ಲಿ ಒಂದು ಚೆಕ್ಕುಲಿ ತಿಂದೆ ಅದರ ರುಚಿನೇ ಬೇರೆಯಾಗಿತ್ತು. ಅಂಥಾ ಚಕ್ಕುಲಿ ನಾನು ಎಂದೂ, ಎಲ್ಲೂ ತಿಂದಿರಲಿಲ್ಲ.
ಕಿಟ್ಟು : ಅಯ್ಯೋ ಗುಗ್ಗು, ಅದು ಚಕ್ಕುಲಿ ಅಲ್ಲವೋ, ನೀನು ತಿಂದದ್ದು ಮಸ್ಕಿಟೋ ಕಾಯಲ್.
***
ಅಪ್ಪ : ಅಯ್ಯೋ !ಅಯ್ಯೋ ! ಮುಂಡೆದೆ ದೇವರ ಪಟದ ಮೇಲೆಕೋ ಕಲ್ಲಿಟ್ಟೆ ?
ರಾಜು : ಅಮ್ಮ ಹೇಳಿದ್ದಾಳೆ.
ಅಪ್ಪ : ನಿಮ್ಮಮ್ಮ ಏನು ಹೇಳಿದ್ದಾಳೋ ?
ರಾಜು : ಪರೀಕ್ಷೆಗೆ ಹೋಗಬೇಕಾದರೆ ದೇವರ ಮೇಲೆ ಭಾರ ಹಾಕಿ ಹೋಗು ಅಂತ.














