ಕಿಟ್ಟು : ಅಲ್ವೋ ರಾಜು, 15 ದಿನದಿಂದ ನೋಡ್ತಾ ಇದ್ದೀನಿ, ಒಂದೇ ಕಲರ್ ಬಟ್ಟೆ ಹಾಕೊಂಡಿದ್ದಿಯಲ್ಲ, ನಿಂಗೆ ಬೇರೆ ಬಟ್ಟೆಗಳು ಇಲ್ವಾ?
ರಾಜು : ಅಲ್ವೋ ಕಿಟ್ಟು, ನಾನು ಹುಟ್ಟಿದಾಗಿನಿಂದ ನಿನ್ನ ನೋಡ್ತಾನೆ ಇದ್ದೀನಿ, ಅದೇ ಕಣ್ಣುಗಳಲ್ಲಿ ನೋಡ್ತಾ ಇದ್ದೀಯ. ಏಕೆ ಬೇರೆ ಕಣ್ಣಿಲ್ವಾ ?
***
ರಾಜು : ಡಾಕ್ಟ್ರೇ ಒಂದು ಹುಳುಕಲ್ಲು ಕೀಳೋಕೆ ಎಷ್ಟು ತಗೊಳ್ತಿರಿ ?
ಡಾಕ್ಟರ್ : 100 ರೂಪಾಯಿ ತಗೊಳ್ತೀನಿ.
ರಾಜು : ಚೆನ್ನಾಗಿರೋ ಹಲ್ಲು ಕೀಳೋಕೆ ?
ಡಾಕ್ಟರ್ : ಏನು ತೆಗೆದುಕೊಳ್ಳೋದಿಲ್ಲ.
ರಾಜು : ಹಾಗಾದ್ರೆ ನನ್ನ ಎಲ್ಲಾ ಹಲ್ಲು ಕಿತ್ತುಬಿಡಿ.
***
ಕಿಟ್ಟು : ರಾಜು ನೀನೇನೋ ಡೈವರ್ಸ್ ತೊಗೊಳ್ತೀಯ ಅಂತ ಕೇಳಿದೆ. ಏಕೆ ಅಂತ ಕೇಳಬಹುದಾ ?
ರಾಜು : ನಾನು ಯಾವ ಕಾರಣಕ್ಕೆ ಅವಳನ್ನು ಮದುವೆಯಾದ್ನೋ, ಅದೇ ಕಾರಣಕ್ಕೆ ತಗೋಬೇಕಾಗಿದೆ.
ಕಿಟ್ಟು : ಅಂದರೆ ನನಗೆ ಅರ್ಥವಾಗಲಿಲ್ಲ
ರಾಜು : ಕಾಲೇಜಿನಲ್ಲಿ ನಡಿತಿದ್ದ ಡಿಬಡಟ್ಟಿನಲ್ಲಿ ನಾನು ವಾದಿ, ಅವಳು ಪ್ರತಿವಾದಿಯಾಗಿ ಬಹುಮಾನ ಪಡಿತಾ ಇದ್ಲು. ಈಗ ನಿಜ ಜೀವನದಲ್ಲೂ ಅದೇ ಮುಂದುವರಿಸುತ್ತಿದ್ದಾಳೆ.
***
ಅಪ್ಪ : ಇವತ್ತಿನ ಪರೀಕ್ಷೆ ಪೇಪರ್ ಹೇಗಿತ್ತು ? ಕಷ್ಟವಾಗಿತ್ತ ಇಲ್ವಾ…
ರಾಜು : ಬರೀ ನಂಗೆ ಗೊತ್ತಿಲ್ಲದ ಪ್ರಶ್ನೆಗಳನ್ನು ಕೇಳಿದರು ಕಣಪ್ಪ.
ಅಪ್ಪ : ಅದಕ್ಕೆ ನೀನೇನು ಮಾಡಿದೆ ?
ರಾಜು : ಅವರಿಗೆ ಗೊತ್ತಾಗದ ಉತ್ತರಗಳನ್ನೇ ಬರೆದು ಬಂದೆ.