ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : (ಒಮ್ಮೆ ರೋಗಿಯಾಗಿದ್ದ ಡಾಕ್ಟರಲ್ಲಿ ಹೀಗೆ ಕೇಳಿದ) ಸಾರ್ ತಾವು ಆಸ್ಪತ್ರೆಯನ್ನು ಈ ಸ್ಮಶಾನದ ಹತ್ತಿರ ಏಕೆ ಕಟ್ಟಿಸಿದಿರಿ ?

ಡಾಕ್ಟರ್ : ಸ್ಮಶಾನದಲ್ಲಿ ನಾನು ಆಸ್ಪತ್ರೆ ಕೊಟ್ಟುಸಿಲ್ಲವಯ್ಯ, ನಾನು ಆಸ್ಪತ್ರೆ ಕಟ್ಟಿದ್ಮೇಲೆ ಇಲಿ ಸ್ಮಶಾನವಾಯ್ತು.

***

ಕಿಟ್ಟು : ರಾಜು ನಿನಗೆ ಈಜು ಬರುತ್ತೇನೋ ?

ರಾಜು : ನನಗೆ ಈಜು ಬರುವುದಿಲ್ಲ ಕಣೋ. 

ಕಿಟ್ಟು : ನಿನ್ನ ನಾಯಿಗೆ ಈಜು ಬರುತ್ತೋ, ?

ರಾಜು : ಅದು ಸೊಗಸಾಗಿ ಈಜುತ್ತೆ

ಕಿಟ್ಟು : ನಿನಗಿಂತ ನಾಯಿನೇ ಮೇಲು.

ರಾಜು : ನಿಂಗೆ ಈಜೋಕೆ ಬರುತ್ತಾ ?

ಕಿಟ್ಟು : ನಿಮ್ಮ ನಾಯಿಗಿಂತ ಚೆನ್ನಾಗಿ ಈಜುತ್ತೇನೆ.

ರಾಜು : ಹೌದೇ ? ಹಾಗಾದ್ರೆ ನಿಂಗೂ ನಾಯೀಗೂ ಏನೂ ವ್ಯತ್ಯಾಸವೇ ಇಲ್ಲ.