ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಅಮ್ಮ, ನಾನಿವತ್ತು ಶಾಲೆಗೆ ಹೋಗೋದಿಲ್ಲ.

ತಾಯಿ : ಯಾಕೋ ?

ರಾಜು : ಶಾಲೆಯಲ್ಲಿ ಟೀಚರ್ ದಿನಾಲೂ ಹೊಡಿತಾರೆ.

ತಾಯಿ : ಸುಮ್ನೆ ಯಾಕೋ ಹೊಡಿತಾರೆ ? ನೀನೇನೋ ತರ್ಲೆ ಮಾಡ್ತೀಯಾ ಅಂತ ಕಾಣುತ್ತೆ ?

ರಾಜು : ನಾನು ಏನು ತರ್ಲೆ ಮಾಡೋದಿಲ್ಲಮ್ಮ. ನನ್ನ ಪಾಡಿಗೆ ನಾನು ಸುಮ್ನೆ ನಿದ್ರೆ ಮಾಡ್ತಾ ಇರ್ತೀನಿ, ಆದರೆ ಎಬ್ಬಿಸಿ ಹೊಡಿತಾರೆ.

+++++++++++++++++++++++

ರಾಜು : ನಿಮ್ಮಲ್ಲಿ ಸ್ಪೆಷಲ್ ಕಾಫಿ ಸಿಗುತ್ತಂತೆ ?

ಮಾಣಿ : ಹೌದು ಸಿಗುತ್ತೆ

ರಾಜು : ಹಾಗಾದ್ರೆ ಸ್ಪೆಷಲ್ ಕಾಫಿಗೂ, ಆರ್ಡಿನರಿ ಕಾಫಿಗೂ ಏನು ವ್ಯತ್ಯಾಸ ?

ಮಾಣಿ : ಸ್ಪೆಷಲ್ ಕಾಫಿಗೆ ಗ್ಲಾಸ್ ಚೆನ್ನಾಗಿ ತೊಳೆದಿರುತ್ತೆ.

++++++++++++++++++++++++++++

ಟೀಚರ್ : ಒಳ್ಳೆ ಮನಸ್ಸಿಂದ ದೇವರನ್ನು ಪ್ರಾರ್ಥಿಸಿದರೆ ಅವನು ನಿಮಗೆ ಏನ್  ವರ ಬೇಕಾದರೂ ಕೊಡುತ್ತಾನೆ.

ರಾಜು : ಸುಮ್ನಿರಿ ಸರ್ ನಿಮ್ ಮಾತು ನಿಜವಾಗೋದಾಗಿದ್ರೆ ಇಷ್ಟೊತ್ತಿಗೆ ನೀವು ಸಮಾಧಿ ಸೇರ್ತಾ ಇದ್ರಿ.