ಆಫೀಸರ್ : ರೀ, ರಾಜು ಈ ಕೆಳಗೆ ಬಿದ್ದಿರೋ ತುಂಡು ಸಿಗರೇಟ್ ನಿಮ್ಮದಾ ?
ರಾಜು : ಅದು ನಂದಲ್ಲ ಸಾರ್, ಬೇಕಾದರೆ ಅದನ್ನ ನೀವು ಉಪಯೋಗಿಸಿಕೊಳ್ಳಿ.
***
ರಾಜು : (ಒಬ್ಬ ಚೈನಾ ದೇಶದವನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಚೀನಾದವರು ಒಂದೊಂದೇ ನೊಣ ಹಿಡಿದು ತಿನ್ನುತ್ತಿದ್ದ) ನೀನು ಏನು ತಿಂತಾ ಇದ್ದೀಯಾ ?
ಚೀನಿ : ನೊಣಗಳನ್ನು.
ರಾಜು : ಒಂದು ನಿಮಿಷ ತಡಿ (ಎಂದು ಹೇಳಿ ಒಂದು ಬೊಗಸೆ ನೊಣ ಹಿಡಿದು) ತಗೋ ಇದಕ್ಕೆ ಎಷ್ಟು ದುಡ್ಡು ಕೊಡ್ತೀಯಾ ಕೊಡು.