ಡಾಕ್ಟರ್ : ನರ್ಸ್ 250ನೇ ಬೆಡ್ ನಲ್ಲಿದ್ದ ಪೇಷಂಟ್ ಎಲ್ಲಿ ಕಾಣ್ತಾ ಇಲ್ಲ?
ನರ್ಸ್ : ಅವನಿಗೆ 106 ಡಿಗ್ರಿ ಜ್ವರ ಬಂದಿತ್ತು ಸಾರ್..
ಡಾಕ್ಟರ್ : ಅದಕ್ಕೆ…
ನರ್ಸ್ : 275ನೇ ಬೆಡ್ ನಲ್ಲಿದ್ದ ಪೇಷಂಟ್ ತುಂಬಾ ಚಳಿ ಅಂತ ನೋಡುಗ್ತಾ ಇದ್ದ, ಅವನಿಗೆ ಬೆಚ್ಚಗಾಗಲಿ ಅಂತ ಇವನನ್ನ ಅವನ ಪಕ್ಕ ಮಲಗಿಸಿದ್ದೆ ಸರ್.
***
ರಾಜು : ಕಿಟ್ಟು, ಈಗ ಕಳ್ಳರನ ಪತ್ತೆ ಮಾಡೋ ಯಂತ್ರ ಕಂಡು ಹಿಡಿದಿದ್ದಾರೆ
ಕಿಟ್ಟು : ಹಾಗಾದ್ರೆ ಆ ಯಂತ್ರ ಕಳ್ಳರನ್ನು ಪತ್ತೆ ಮಾಡಿದ್ದೀಯಾ ?
ರಾಜು : ಮಾಡಿದೆ, ಅಮೆರಿಕದಲ್ಲಿ 50, ಇಂಗ್ಲೆಂಡಿನಲ್ಲಿ 60
ಕಿಟ್ಟು : ಭಾರತದಲ್ಲಿ ?
ರಾಜು : ಭಾರತದಲ್ಲಿ ಆ ಮಿಷನ್ ತಂದ್ರು ಆದರೆ ಆ ಮಿಷನ್ನ್ನೇ ನಾಪತ್ತೆ ಆಯ್ತು.
***
ರಾಜು : (ಕಂಪ್ಯೂಟರ್ ಮಾರುವ ಅಂಗಡಿಯಲ್ಲಿ) ಈ ಕಂಪ್ಯೂಟರ್ ನಿಂದ ಏನು ಪ್ರಯೋಜನ ?
ಅಂಗಡಿಯವ : ಇದೇನು ಹೀಗೆ ಕೇಳ್ತೀರಿ. ಈ ಕಂಪ್ಯೂಟರ್ ನಿಮ್ಮ ಕೆಲಸದ ಹೊರೆಯನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.
ರಾಜು : ಹಾಗಾದ್ರೆ ನನಗೆ ಎರಡು ಕಂಪ್ಯೂಟರ್ ಕೊಡಿ. ನಾನು ಆರಾಮಾಗಿ ಇದ್ದು ಬಿಡ್ತೀನಿ.
Saval TV on YouTube