ರಾಜು : ಸಾರ್ ನಂದೊಂದು ಕೇಸ್ ನಡೆಸಿಕೊಡ್ಬೇಕು. ನಾನು ಬಡವ.
ಲಾಯರ್ : ನನ್ನ ಫೀಜ್ ತುಂಬಾ ಜಾಸ್ತಿ.
ರಾಜು : ಸುಮಾರು ಎಷ್ಟಾಗಬಹುದು?
ಲಾಯರ್ : ಈಗ ಎಷ್ಟು ಹಣ ತಂದಿದ್ದೀಯ?
ರಾಜು : ಈಗ ನನ್ನ ಕೈಲಿ ಹಣ ಇಲ್ಲ. ಈ ಕಾರಿದೆ
ಲಾಯರ್ : ಆಯ್ತು,ಆ ಕಾರೇ ನನ್ನ ಫೀಜು ಅಂತ ತಿಳ್ಕೋಳ್ತೀನಿ. ನಿನ್ನ ಮೇಲಿರೋ ಕೇಸೇನು?
ರಜು : ಈ ಕಾರು ಕದ್ದಿರೋದೇ ನನ್ಮೇಲಿರೋ ಕೇಸು.
***
ಕಿಟ್ಟು:ಆ ಮನುಷ್ಯನ ನೋಡು ಹೇಗೆ ಹುಚ್ಚುಚ್ಚಾಗಿ ಆಡ್ತಾ ಇದ್ದಾನೆ?
ರಾಜು:ಅವನು ಮಾಸ್ಟ್ರು ಕಣೋ.
ಕಿಟ್ಟು : ಮತ್ತೆ ಹೀಗೇಕೆ ಆಡ್ತಾ ಇದ್ದಾನೆ?
ರಾಜು: ಈ ನಲಿ ಕಲಿ ಅಂತ ಬಂದು.ನೋಡು ಆಗ್ನಿಂದ ಹೀಗಾಡ್ತಾರೆ.














