ಮಗ ತುಂಬಾ ಚೇಷ್ಠೆ ಮಾಡುವ ಸ್ವಭಾವದವನು. ತಂದೆಗೆ ಒಮ್ಮೆ ಭಾರಿ ಕೋಪಬಂದು ‘ಕತ್ತೆ ಮಗನೆ’ ಎಂದು ಮಗನನ್ನು ಬೈದರು. ಇದನ್ನು ಕೇಳಿಸಿಕೊಂಡ ಮಗ “ಹೌದೆನಪ್ಪಾ, ನನಗೆ ಈಗಲೇ ತಿಳಿದಿದ್ದು ನನ್ನ ಅಪ್ಪ ‘ಕತ್ತೆ’ ಎನ್ನುವ ವಿಚಾರ”.
***
ಬೀಚಿಯವರ ಜೋಕು: ವರಮಹಾಶಯ ಮದುವೆಯಾಗಲು ಹೆಣ್ಣನ್ನು ನೋಡುವ ಸಂದರ್ಭ:
“ಇವಳಿಗೆ ೨೦ ವರ್ಷ ೨೦೦೦೦/- ರೂ ವರದಕ್ಷಿಣೆ ಅವಳಿಗೆ ೩೦ ವರ್ಷ- ೩೦೦೦೦/-” ಅಲ್ಲಿದ್ದಾಳಲ್ಲ ಅವಳಿಗೆ ೪೦ ವರ್ಷ. ೪೦೦೦೦/- “ಯಾರನ್ನು ಇಷ್ಟಪಡುತ್ತೀ?
ಗಂಡು: “ನಿಮ್ಮಪಕ್ಕದಲ್ಲಿದ್ದಾರಲ್ಲ. ಅವರಿಗೆ ಎಷ್ಟು ಆಗುತ್ತೆ?”
ಅವರು: “ಥೂ ಮುಟ್ಟಾಳ, ಅವಳು ನನ್ನ ಹೆಂಡತಿ, ತಿಳೀತಾ ?”!
***
ಒಬ್ಬ ವ್ಯಕ್ತಿ ಸನ್ಯಾಸಿಯ ಬಳಿಗೆ ಹೋಗಿ ಕೈಮುಗಿದು ನಿಂತ.
ಸನ್ಯಾಸಿ: “ಏನು ಬೇಕಪ್ಪ, ನನ್ನಿಂದಲೇನಾದರೂ ಸಹಾಯ ಆಗಬೇಕೆ?”
ವ್ಯಕ್ತಿ: “ಹೆಂಡತಿಯನ್ನು ಪಳಗಿಸುವುದು ಹೇಗೆ ಎಂದು ದಯಮಾಡಿ ತಿಳಿಸುವಿರಾ?” ಪ್ರಾರ್ಥಿಸಿದ.
ಸನ್ಯಾಸಿ: “ಹೆಂಡ್ರ ಪಳಗಿಸೋ ವಿದ್ಯೆ ನನಗೆ ಗೊತ್ತಿದ್ದರೆ ನಾನೇಕೆ ಸನ್ಯಾಸಿಯಾಗಿರುತ್ತಿದ್ದೆ? ನೀನೇ ಯೋಚಿಸು, ಅದು ಅಸಾಧ್ಯದ ಮಾತು!”