ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಮೇಡಂ,ತಕ್ಕೋಳಿ ಕೀ.
ಮೇಡಂ : ಅವರಿಲ್ಲಿಗೆ ಹೋದ್ರು?
ರಾಜು : ಮೇಡಂ ಬಾಸ್ ಎಲ್ಲೋ ಟೂರ್ ಹೋದ್ರು.
ಮೇಡಂ : ಸರಿ ನಿಂಗೆ ಏನು ಹೇಳಿ ಹೋದ್ರು?
ರಾಜು : ನಾನಿಲ್ಲದಾಗ ಉಳಿದ ಕೆಲ್ಸಾ ಎಲ್ಲಾ ನೀನೇ ಮಾಡೂ ಅಂತ ಹೇಳಿ ಹೋದ್ರು ಮೇಡಂ.
ಮೇಡಂ : ಹೌದಾ?ಅವರು ಬಾಕಿ ಉಳಿಸಿರೋ ಕೆಲ್ಸ ಒಂದಿದೆ ಒಳಗೆ.

Join Our Whatsapp Group

ರಾಜು : ಅಮೆರಿಕಾದಲ್ಲಿ ಪಬ್ಲಿಕ್ ಪ್ಲೇಸಿನಲ್ಲಿ ಮುತ್ತು ಕೊಡಬಹುದು. ಆದರೆ…..
ಕಿಟ್ಟು : ಆದರೆ ಅಂದ್ರೆ?
ರಾಜು : ಮೂತ್ರ ವಿಸರ್ಜನೆ ಮಾಡೋಹಾಗಿಲ್ಲ.
ಕಿಟ್ಟು : ಭಾರತದಲ್ಲಿ?
ರಾಜು : ಮೂತ್ರ ವಿಸರ್ಜನೆ ಎಲ್ಲಿ ಬೇಕಾದ್ರೂ ಮಾಡಬಹುದು. ಆದರೆ ಮುತ್ತು ಕೊಡುವಂತಿಲ್ಲ.

***

ಕಿಟ್ಟು : ರಾಜು, ಯಾವುದೊ ಬಸ್ಸಿಗೆ ಕಾಯ್ತಾ ಇರೋಹಾಗಿದೆ?
ರಾಜು : ವಿಧಾನಸೌಧಕ್ಕೆ ಹೋಗೋಕೆ ಬಸ್ ಕಾಯ್ತಾ ಇದ್ದೀನಿ.
ಕಿಟ್ಟು : ಹಾಗಾದ್ರೆ ಒಂದು ಕೆಲ್ಸ ಮಾಡು,60ನೇ ನಂಬರ್ ಬಸ್ ಬರುತ್ತೆ. ಅದಕ್ಕೆ ಹೋಗು. (ಎಲ್ಲೋ ಹೋಗಿ ಹಿಂದಿರುಗಿ ಬಂದು ರಾಜು ನೋಡಿ) ಯಾಕಯ್ಯ ಬಸ್ಸು ಬರ್ಲಿಲ್ವೇ?
ರಾಜು : ನೀನೇ ಹೇಳಿದ್ಯಲ್ಲ 60ನೇ ಬಸ್ ಗೆ ಹೋಗೂ ಅಂತ.ಈಗ 56 ಬಸ್
ಬಸ್ ಗಳು ಬಂದು ಹೋದವು.ಇನ್ನು ಮೂರು ಬಸ್ಸು ಹೋದ್ರೆ ನನ್ನ 60ನೇ ಬಸ್ಸು ಬರಬಹುದು.