ಕಿಟ್ಟು : ಅಲ್ಲೊ ರಾಜು, ನಾನು ಕಚೇರಿ ಒಳಗಿಲ್ಲಾ ಅಂತ ಆ ಗುಮಾಸ್ತ ನಿನಗೆ ಹೇಳಿದರೂ ನಾನು ಒಳಗಿದ್ದೀನಿ ಅಂತ ಹೇಗೆ ತಿಳ್ಕೊಂಡೆ?
ರಾಜು : ಆ ನಿಮ್ಮ ಗುಮಾಸ್ತ ಇವತ್ತು ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದ ಅದರಿಂದ ಗೊತ್ತಾಯ್ತು.
***
ಅಪ್ಪ : ರಾಜು, ಬೇಗ ಅಂಗಡಿಗೆ ಹೋಗಿ ಒಂದು ನಿಂಬೆಹಣ್ಣು ತಗೊಂ ಬಾ.
ರಾಜು : ಈಗ ತುಂಬಾ ಬಿಸಿಲು ಕಣಪ್ಪ.
ಅಪ್ಪ : ನೋಡು ಹಿರಿಯೋರ ಮಾತಿಗೆ ಎದುರಾಡಬಾರದು,ಹೇಳಿದ್ದಕ್ಕೆ ಆಯ್ತು,ಆಯ್ತು ಅಂತ ಒಪ್ಪಿಕೊಳ್ಳಬೇಕು. ಗೊತ್ತಾಯ್ತಾ
ರಾಜು : ಗೊತ್ತಾಯ್ತು ಕಣಪ್ಪ.
ಅಪ್ಪ : ರಾಜು ನನಗೆ ಈ ಜೀವವೇ ಬೇಸರವಾಗಿದೆ.ಆತ್ಮಹತ್ಯೆ ಮಾಡಿಕೊಳ್ಳೋಣಾ ಅನ್ನಿಸಿದೆ. ಇದಕ್ಕೆ ನೀನೇನು ಹೇಳ್ತೀಯಾ?
ರಾಜು : ಆಯ್ತು…ಆಯ್ತು…
***
ರಾಜು : ಕಿಟ್ಟು ನಿನ್ನಪ್ಪ ಸತ್ತಲ್ರ ನಿಂಗೇನು ಆಸ್ತಿ ಬಿಟ್ಟು ಹೋದ್ರು?
ಕಿಟ್ಟು : ಒಂದೆರಡು ಎಕರೆ ಹೊಲ, ಒಂದು ಮನೆ ಬಿಟ್ಟು ಹೋದ್ರು, ನಿಮ್ಮಪ್ಪ ನಿನಗೇನು ಬಿಟ್ಟು ಹೋದ್ರು?
ರಾಜು : ಅವರು ಇಡೀ ಪ್ರಪಂಚವನ್ನೇ ನನ್ನ ಪಾಲಿಗೆ ಬಿಟ್ಟು ಹೋದ್ರು.














