ಡಾಕ್ಟರ್: ರಾಜು ನಾನು ನಿನಗೆ ಬರ್ಕೊಟ್ಟ ಮಾತ್ರೆಗಳನ್ನು ತಂದಿದ್ದೀಯಾ
ರಾಜು: ತಂದಿದ್ದೀನಿ ತಗೊಳ್ಳಿ ಡಾಕ್ಟರ್
ಡಾಕ್ಟರ್: ಅರೆ ಇದೇನೇ ಮಾತ್ರೆಗಳ ಬದಿ ಎಲ್ಲಾ ಕತ್ತರಿಸಿಕೊಂಡು ಬಂದಿದ್ದೀಯ
ರಾಜ್ ಸೈಟ್ ಎಫೆಕ್ಟ್ ಆಗಬಾರದು ಅನ್ನೋದಕ್ಕೆ ಹಾಗೆ ಮಾಡಿದೆ ಡಾಕ್ಟರ್
ಡಾಕ್ಟರ್ : ರಾಜು,ನಾನು ನಿನಗೆ ಬರ್ಕೋಟ ಮಾತ್ರೆಗಳನ್ನು ತಂದಿದ್ದೀಯಾ
ರಾಜು : ತಂದಿದ್ದೀನಿ,ತಗೊಳ್ಳಿ ಡಾಕ್ಟರೇ.
ಡಾಕ್ಟರ್ : ಅರೆ! ಇದೇನಯ್ಯ ಮಾತ್ರೆಗಳ ಬದಿಯೆಲ್ಲಾ ಕತ್ತರಿಸಿಕೊಂಡು ಬಂದಿದ್ದೀಯ?
ರಾಜು : ಸೈಡ್ ಎಫೆಕ್ಟ್ ಆಗಬಾರದು ಅನ್ನೋದೆಕ್ಕೆ ಹಾಗೆ ಮಾಡಿದೆ ಡಾಕ್ಟರ್
***
ಕಿಟ್ಟು : ರಾಜು,ಪ್ರೇಮ ವಿವಾಹಕ್ಕೂ ಸಂಪ್ರದಾಯಕ ವಿವಾಹಕ್ಕೂ ಏನು ವ್ಯತ್ಯಾಸ?
ರಾಜು : ನಾವು ಪ್ರೀತಿಸಿದವರನ್ನು ಮದುವೆಯಾಗುವುದು ಪ್ರೇಮ ವಿವಾಹ ಅನೇಕರು ನೋಡಿ ನೋಡಿ ಬೇಡಾ ಅಂತ ಬಿಟ್ಟವರನ್ನ ನಾವು ಮದುವೆಯಾಗೋದು ಸಂಪ್ರದಾಯಕ ವಿವಾಹ.
***
ರಾಜು 🙁 ಒಮ್ಮೆ ಆಧ್ಯಾತ್ಮ ವಿಚಾರದ ಬಗ್ಗೆ ಭಾಷಣ ಮಾಡುತ್ತಾ ) “ದೇವರೇ,ನಾನು ನೀನು ಈ ಮನುಷ್ಯ ಜೀವನದಲ್ಲಿ ತುಂಬಾ ಬಳಲಿ ಬೆಂಡಾಗಿದ್ದೇನೆ ಬೇಗ ನನ್ನನ್ನು ನಿನ್ನ ಬಳಿ ಕರೆಸಿಕೋ.”
ಪ್ರೇಕ್ಷಕ : (ಭಾಷಣ ಕೇಳಿ ಅವನಿಗೆ ಬೋರ್ ಹಿಡಿದಿತ್ತು) “ಬೇಡ…ಬೇಡ. ಹೀಗೆಲ್ಲಾ ಮಾತ್ನಾಡಬೇಡಿ. ನೀವು ಸತ್ತರೆ ನಮ್ಮ ಹೆಣಗಳನ್ನು ಯಾರು ಮಣ್ಣು ಮಾಡೋರು?”















