ರಾಜು : (ತನ್ನ ಪ್ರೇಯಸಿಗೆ ಹೀಗೆ ಪತ್ರ ಬರೆದ)ಪ್ರೀಯೇ, ನನಗೆ ತಿಂಗಳಿಗೆ ಬರುವುದು 5,000 ಸಂಬಳ, ಅದರಲ್ಲಿ ನೀನು ಸಂಸಾರ ಸಾಗಿಸಬಲ್ಲೆಯಾ?
ಗೀತಾ : (ಉತ್ತರಿಸಿದಳು) ಅಷ್ಟು ನನ್ನ ಖರ್ಚಿಗೆ ಸಾಕು. ನಿಮ್ಮ ಖರ್ಚಿಗೆ, ಮನೆ ಖರ್ಚಿಗೆ ಏನ್ ಮಾಡ್ತೀರಿ ತಿಳಿಸಿ.
***
ಅಪ್ಪ : ಅಲ್ಟೋ, ಗಣಿತದಲ್ಲಿ ಮತ್ತೆ ಫೇಲಾಗಿದ್ದೀಯಾ
ರಾಜು :ನಾನೇನು ಮಾಡ್ಲಪ್ಪ ನಮೇಸ್ತ್ರಿಗೇ ಸರಿಯಾಗಿ ಲೆಕ್ಕ ಬರೋಲ್ಲ.
ಅಪ್ಪ: ಅದು ನಿಮಗೆ ಹೇಗೋ ಗೊತ್ತಾಯ್ತು
ರಾಜು: ಮೊದಲನೆಯ ದಿನ ಐದು ಐದು ಅಂದ್ರು ಎರಡನೆಯ ದಿನ 8 2 10 ಅಂದ್ರು ಮೂರನೆಯ ದಿನ ಆರು ನಾಲಕ್ಕು 10 ಅಂದ್ರು ಲೆಕ್ಕದಲ್ಲಿ ಅವರೇ ಅಷ್ಟು ವೀಕ್ ಆಗಿರುವಾಗ ನಾನು ಹೆಂಗಪ್ಪ ಪಾಸಾಗುವುದು