ಹೋಟೆಲ್ ಹೊರಗಡೆ ಬೋರ್ಡ್ ಹಾಕಲಾಗಿತ್ತು. “ಇಲ್ಲಿ ದೋಸೆ ಫ್ರೀ.. ಒಬ್ಬೊಬ್ಬರಿಗೆ ಇಪ್ಪತ್ತು ದೋಸೆ ಫ್ರೀ… ನಂಗೂ ಫ್ರೀ… ನಿಮಗೂ ಫ್ರೀ… ಅಂತ..
ಇದನ್ನು ನೋಡಿದ ಗುಂಡ ಸರಕ್ಕನೆ ಹೋಟೆಲ್ ಒಳಗೆ ಹೋಗಿ ಇಪ್ಪತ್ತು ದೋಸೆ ಹೊಡೆದು ಹೊರಬರಬೇಕಾದ್ರೆ ಕ್ಯಾಶ್ ಕೌಂಟರ್ ನಲ್ಲಿ ಕೂತಿದ್ದ ಹೊಸ ಮ್ಯಾನೇಜರ್ ಸಿದ್ದೇಶ ತಡೀತಾನೆ.
ಸಿದ್ದೇಶ: ಸರ ನಿಲ್ರಿ ಸರ..
ಗುಂಡ: ಏನು..??
ಸಿದ್ದೇಶ: ದೋಸೆ ತಿಂದ್ರ..??
ಗುಂಡ: ಹೂನ್ರಿ…
ಸಿದ್ದೇಶ: 20 ದೋಸೆ ತಿಂದ್ರ?
ಗುಂಡ: ಹೌದ್ರಿಯಪ್ಪ..
ಸಿದ್ದೇಶ: ಚಟ್ನಿ, ಸಾಂಬರ್ ಎಲ್ಲಾ ಒಳ್ಳೆದ್ದಿತ್ತ..?
ಗುಂಡ: ಚಲೋ ಐತ್ರಿಯಪ್ಪ…
ಸಿದ್ದೇಶ: ಮತ್ ಬಿಲ್ ಕೊಡ್ರಲಾ.
ಗುಂಡ: ಮತ್ ಹೊರಗಾ 20 ದೋಸೆ ಫ್ರೀ ಅಂತ ಬೋರ್ಡ್ ಹಚ್ಚಾರಾ..??
ಸಿದ್ದೇಶ: ಹೂನ್ರಿ ನಾವೇ ಹಚ್ಚಿದ್ದು.
ಗುಂಡ: ಮತ್ ಬಿಲ್ ಕೇಳಕ್ಕತ್ತಿರಾ..??
ಸಿದ್ದೇಶ: ಫ್ರೀ ದೋಸೆ ಮಾತ್ರ ರೀ.. ಸಾಂಬರ್ ಚಟ್ನಿ ಫ್ರೀ ಇಲ್ಲಾರೀ.. ಅದಕ್ಕ 400 ಆಯ್ತ್ ರೀ..
ಗುಂಡ: ಮತ್ ಯಾಕ್ ಬೋರ್ಡ್ ಹಚ್ಚಿರಾ..??
ಸಿದ್ದೇಶ: ನಮಗ ಗಿರಾಗಿ ಬ್ಯಾಕ್ರಿ ಅದಕಾ ಹಚ್ಚಿವ್ರಿ. ಬೋರ್ಡ್ ಹಚ್ಚಿದಾಂಗ ನಡ್ಕೋತೀವಿ.. ನಾವೇನ್ ದ್ವಾಸಿಗೆ ಹಣ ಕೇಳೊಲ್ಲ ರೀ.. ಅದು ನನಗೂ ಉಚಿತ, ನಿಮಗೂ ಉಚಿತ..
ಗುಂಡ: ಮತ್ತೆ ಚಟ್ನಿ ಸಾಂಬರಿಗೆ ರೇಟಿದೆ ಅಂತ ಯಾಕ್ ಹೇಳಿಲ್ಲ?
ಸಿದ್ದೇಶ: ನಮ್ ಹೋಟ್ಲು, ನಮ್ ಬೋರ್ಡು, ನಮ್ ಇಷ್ಟ ನೀವ್ ಬಿಲ್ ಕೊಡ್ರಿ.
ಗುಂಡ ಮುಚ್ಕೊಂಡ್ 400 ರೂಪಾಯಿ ಬಿಲ್ ಕೊಟ್ಟ್ ಬಂದ…